masthmagaa.com:

ಹೈದ್ರಾಬಾದ್​ನಲ್ಲಿ ರೋಹಿಂಗ್ಯಾಗಳು ಅಕ್ರಮವಾಗಿ ವಾಸಿಸುತ್ತಿದ್ದರೆ ಗೃಹ ಸಚಿವ ಅಮಿತ್ ಶಾ ಏನ್ ಮಾಡ್ತಿದ್ದಾರೆ ಅಂತ ಕೇಳಿದ್ದ AIMIM ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿಗೆ ಸ್ವತಃ ಅಮಿತ್ ಶಾ ಅವರೇ ಉತ್ತರ ಕೊಟ್ಟಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಅಕ್ರಮ ವಾಸಿಗಳ ವಿರುದ್ಧ ನಾನು ಕ್ರಮ ತೆಗೆದುಕೊಳ್ಳಲು ಮುಂದಾದ್ರೆ ಇವ್ರು ಸಂಸತ್​ನಲ್ಲಿ ಗದ್ದಲ ಎಬ್ಬಿಸಿಬಿಡ್ತಾರೆ. ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನ ಹೊರಹಾಕಬೇಕೆ ಅಂತ ಒವೈಸಿ ಅವರು ಲಿಖಿತ ರೂಪದಲ್ಲಿ ಬರೆದು ಕೊಡಲಿ. ಆಮೇಲೆ ಏನು ಮಾಡಬೇಕು ಮಾಡ್ತೀನಿ. ಸಂಸತ್​ನಲ್ಲಿ ಇದರ ಬಗ್ಗೆ ಚರ್ಚೆ ನಡೆದಾಗ ಇವರ ಪರ ವಹಿಸಿ ಮಾತನಾಡೋದು ಯಾರು ಅಂತ ಇಡೀ ದೇಶಕ್ಕೆ ಗೊತ್ತು. ದೇಶದ ಜನ ಟಿವೀಲಿ ಲೈವ್ ನೋಡಿದ್ದಾರೆ’ ಅಂತ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಂದ್ಹಾಗೆ ಗ್ರೇಟರ್ ಹೈದ್ರಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ (GHMC) ಚುನಾವಣೆಗೆ ಸಂಬಂಧಿಸಿದಂತೆ ಇವತ್ತು ಅಮಿತ್ ಶಾ ರೋಡ್ ಶೋ ನಡೆಸಿದ್ರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಹೈದ್ರಾಬಾದ್​ ನಗರಕ್ಕೆ ನಿಜಾಮ ಸಂಸ್ಕೃತಿಯಿಂದ ಮುಕ್ತಿ ನೀಡುತ್ತೇವೆ. ಪ್ರಜಾಪ್ರಭುತ್ವ ತತ್ವಗಳುಳ್ಳ ಹೊಸ ನಗರವನ್ನ ನಿರ್ಮಿಸುತ್ತೇವೆ. ಈ ಬಾರಿ ನಮ್ಮ ಪಕ್ಷದವರೇ ಹೈದ್ರಾಬಾದ್ ಮೇಯರ್ ಆಗ್ತಾರೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply