masthmagaa.com:

ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಕಲರ್​ಫುಲ್​ ಟೂರ್ನಿ ಐಪಿಎಲ್​ ನಡೆಯುತ್ತಿರುವ ನಡುವೆಯೇ ಇದೀಗ ವನಿತೆಯರ ಟಿ-20 ಚಾಲೆಂಜ್​ಗೆ ಕ್ಷಣಗಣನೆ ಆರಂಭವಾಗಿದೆ. ಇದು ಕೂಡ ಐಪಿಎಲ್​ ರೀತಿಯಲ್ಲೇ ಇರುತ್ತದೆ. ಇದರಲ್ಲಿ ಒಟ್ಟು ಮೂರು ತಂಡಗಳು ಸೆಣಸಾಟ ನಡೆಸಲಿವೆ. ಸೂಪರ್​ನೋವಾಸ್, ಟ್ರಯಲ್​ಬ್ಲೇಝರ್ಸ್​ ಮತ್ತು ವೆಲಾಸಿಟಿ. ಇದೀಗ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI) ಈ ಮೂರೂ ತಂಡಗಳ ನಾಯಕಿಯರನ್ನು ಪ್ರಕಟಿಸಿದೆ. ಸೂಪರ್​ನೋವಾಸ್ ತಂಡಕ್ಕೆ ಹರ್ಮನ್​ಪ್ರೀತ್​ ಕೌರ್, ಟ್ರಯಲ್​ಬ್ಲೇಝರ್ಸ್​ ತಂಡಕ್ಕೆ ಸ್ಮೃತಿ ಮಂಧಾನಾ ಮತ್ತು ವೆಲಾಸಿಟಿ ತಂಡಕ್ಕೆ ಮಿಥಾಲಿ ರಾಜ್​ ಅವರನ್ನು ನಾಯಕಿಯರಾಗಿ ಆಯ್ಕೆ ಮಾಡಲಾಗಿದೆ.

ನವೆಂಬರ್​ 4ರಿಂದ 9ರವರೆಗೆ ಒಟ್ಟು 6 ದಿನಗಳವರೆಗೆ ಯುಎಇನಲ್ಲೇ ಮಹಿಳೆಯರ ಟಿ-20 ಚಾಲೆಂಜ್​ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಸೂಪರ್​ನೋವಾಸ್ ಮತ್ತು ರನ್ನರ್ ಅಪ್​ ವೆಲಾಸಿಟಿ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ಪಂದ್ಯಗಳು ಶಾರ್ಜಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿವೆ ಅಂತ ಮೂಲಗಳು ತಿಳಿಸಿವೆ. ಈ ಟೂರ್ನಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್​​ಗಳ ಜೊತೆಗೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್​ ಇಂಡೀಸ್, ಬಾಂಗ್ಲಾದೇಶ ಮತ್ತು ನ್ಯೂಝೀಲ್ಯಾಂಡ್​ ದೇಶಗಳ ಮಹಿಳಾ ಕ್ರಿಕೆಟರ್ಸ್​ ಭಾಗವಹಿಸಲಿದ್ದಾರೆ. ಮೂರು ತಂಡಗಳು ಈ ಕೆಳಗಿನಂತಿವೆ

Supernovas: Harmanpreet Kaur (c), Jemimah Rodrigues, Chamari Atapattu, Priya Punia, Anuja Patil, Radha Yadav, Taniya Bhatia, Shashikala Sriwardene, Poonam Yadav, Shakera Selman, Arundhati Reddy, Pooja Vastrakar, Ayushi Soni, Ayabonga Khaka, Muskan Malik.

Trailblazers: Smriti Mandhana (c), Deepti Sharma, Punam Raut, Richa Ghosh, D Hemlatha, Nuzhat Parween, Rajeshwari Gayakwad, Harleen Deol, Jhulan Goswami, Simaran Dil Bahadur, Salma Khatun, Sophie Ecclestone, Natthakan Chantham, Deandra Dottin, Kashvee Gautam.

Velocity: Mithali Raj, Shafali Verma, Veda Krishnamurthy, Sushma Verma, Ekta Bisht, Mansi Joshi, Shikha Pandey, Devika Vaidya, Sushree Dibyadarshini, Manali Dakshini, Leigh Kasperek, Danielle Wyatt, Sune Luus, Jahanara Alam, M Anagha.

-masthmagaa.com

Contact Us for Advertisement

Leave a Reply