ಚೀನಾದಿಂದ ಹೊಸ ವೈರಸ್ ವಾರ್ನಿಂಗ್! ಏನು ಗೊತ್ತಾ?

masthmagaa.com:

ಈಗಾಗಲೇ ಒಮೈಕ್ರಾನ್​ ಹಾವಳಿ ಮಿತಿ ಮೀರಿದ್ದು, ಇಡೀ ವಿಶ್ವದಲ್ಲಿ ಕೊರೋನಾ ಹೊಸ ದಾಖಲೆ ಬರೆದಿದೆ. ಇದ್ರ ಬೆನ್ನಲ್ಲೇ ಈಗ ಕೊರೋನಾದ ಮತ್ತೊಂದು ವೈರಾಣು ಹುಟ್ಕೊಂಡಿರೋ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದನ್ನು ನಿಯೋ ಕೋವ್ ಅಂತ ಕರೆಯಲಾಗಿದೆ. ಕೊರೋನಾ ಮೊದಲು ಪತ್ತೆಯಾದ ಚೀನಾದ ವುಹಾನ್ ವಿಜ್ಞಾನಿಗಳು ಈ ಬಗ್ಗೆ ಮಾಹಿತಿ ನೀಡಿದ್ಧಾರೆ. ಈ ರೂಪಾಂತರಿ ಕೊರೋನಾ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ಇದು ಬಂದ ಮೂವರಲ್ಲಿ ಒಬ್ಬರು ಪ್ರಾಣ ಕಳ್ಕೊಳ್ತಾರೆ.. ಮತ್ತು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡೋ ಸಾಮರ್ಥ್ಯ ಹೊಂದಿದೆ.. ಅಷ್ಟು ಭಯಾನಕವಾಗಿದೆ ಈ ವೈರಾಣು ಅಂತ ಕೂಡ ವಿಶ್ವಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಂದಹಾಗೆ ಈ ವೈರಾಣು ವಿಶ್ವಕ್ಕೆ ಹೊಸತೇನಲ್ಲ.. 2012 ಮತ್ತು 2015ರಲ್ಲೇ ಮಿಡಲ್ ಈಸ್ಟ್​ ದೇಶಗಳಲ್ಲಿ ನಿಯೋಕೋವ್ ಪತ್ತೆಯಾಗಿತ್ತು. ಇದು ಕೊರೋನಾ ವೈರಾಣುವಿನಂತೆಯೇ ಇದ್ದು, ಸಾರ್ಸ್​ ಕೋವ್ ವೈರಾಣುವಿನೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಜೊತೆಗೆ ಇದು ಇನ್ನೂ ಕೂಡ ಮನುಷ್ಯರಿಗೆ ಹರಡೋಕೆ ಶುರುವಾಗಿಲ್ಲ. ಸದ್ಯ ದಕ್ಷಿಣ ಆಫ್ರಿಕಾದ ಬಾವಲಿಗಳಲ್ಲಿ ಪತ್ತೆಯಾಗಿದ್ದು, ಪ್ರಾಣಿಗಳಲ್ಲಿ ಮಾತ್ರವೇ ಹರಡುತ್ತಿವೆ. ಈಗ ನಿಯೋಕೋವ್ ಮತ್ತು ಅದರ ಹತ್ತಿರದ ಸಂಬಂಧಿ ಪಿಡಿಎಫ್ 2180-ಕೋವ್ ಮನುಷ್ಯರಿಗೂ ಹರಡಬಹುದು ಅಂತ ಬಿಯೋರಿಕ್ಸಿವ್ ಅನ್ನೋ ವೆಬ್​ಸೈಟ್​ನಲ್ಲಿ ಪ್ರಕಟಿಸಲಾದ ವುಹಾನ್ ವಿವಿ ಮತ್ತು ಚೈನಾ ಅಕಾಡೆಮಿ ವಿಜ್ಞಾನಿಗಳ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಜೊತೆಗೆ ಈ ಸಂಬಂಧ ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ ಅಂತ ಕೂಡ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply