ದೆಹಲಿ: ಶ್ರದ್ಧಾ ಹತ್ಯೆ ರೀತಿಯಲ್ಲಿಯೇ ಪತಿಯನ್ನ ಕೊಲೆ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟ ಮಹಿಳೆ

masthmagaa.com:

ದೆಹಲಿಯ ಶ್ರದ್ಧಾಳ ಭಯಾನಕ ಕೊಲೆ ಕೇಸ್‌ನ್ನೇ ಜನ ಇನ್ನೂ ಮರ್ತಿಲ್ಲ. ಆದ್ರೆ ಈಗ ದಿಲ್ಲಿಯಲ್ಲಿ ಅಂತದೇ ಇನ್ನೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಮಗನ ಸಹಾಯ ಪಡೆದು ತನ್ನ ಪತಿಯನ್ನ ಕೊಲೆ ಮಾಡಿದ್ದಾಳೆ. ನಂತ್ರ 22 ಪೀಸ್‌ಗಳಾಗಿ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟು ಪ್ರತಿದಿನ ರಾತ್ರಿ ಅವುಗಳನ್ನ ಬಿಸಾಡಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ. ತನ್ನ ಪತಿಗೆ ಬೇರೆ ಮಹಿಳೆ ಜೊತೆ ಸಂಬಂಧ ಇತ್ತು ಅನ್ನೋ ಕಾರಣಕ್ಕೆ ತಾಯಿ ಮಗ ಸೇರ್ಕೊಂಡು ಈ ಕೃತ್ಯ ಎಸಗಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ. ಇತ್ತ ಶ್ರದ್ದಾಕೊಲೆ ಕೇಸ್‌ನ ಆರೋಪಿಯನ್ನ ತನಿಖೆ ನಂತ್ರ ಕರೆದೊಯ್ತಿದ್ದ ವೇಳೆ ಆತನ ಮೇಲೆ ಉದ್ರಿಕ್ತ ಗುಂಪೊಂದು ಅಟ್ಯಾಕ್‌ ಮಾಡೋಕೆ ಪ್ರಯತ್ನ ಮಾಡಿದೆ. ಪೊಲೀಸರು ಆತನನ್ನ ಸುರಕ್ಷತವಾಗಿ ಕರೆದುಕೊಂಡು ಹೋಗಿದೆ.

-masthmagaa.com

Contact Us for Advertisement

Leave a Reply