ಬಂದಿದೆ ಆಫ್ರಿಕಾದ ಭಯಾನಕ ತಳಿ: ಅದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!

masthmagaa.com:

ಕೊರೋನಾ ಕಮ್ಮಿಯಾಯ್ತು ಅನ್ನುವಾಗಲೇ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರೋ ಕೊರೋನಾದ ಹೊಸ ತಳಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಹೊಸ ವೇರಿಯಂಟ್​​ಗೆ ಜಗತ್ತಿನ ಒಂದೊಂದು ದೇಶದಿಂದ ಒಂದೋಂದು ರೀತಿಯ ರೆಸ್ಪಾನ್ಸ್ ಬರ್ತಿದೆ. ದಕ್ಷಿಣ ಆಫ್ರಿಕಾ ಮತ್ತು ಅದರ ಅಕ್ಕಪಕ್ಕದ ದೇಶಗಳಾದ ಬೋಟ್ಸ್​ವಾನಾ, ನಮೀಬಿಯಾ, ಜಿಂಬಾಂಬ್ವೆ, ಇಸ್ವಾತಿನಿ, ಲೆಸೊತೋ ದೇಶಗಳಿಂದ ಬರುವ ವಿಮಾನಗಳಿಗೆ ಯುನೈಟೆಡ್​ ಕಿಂಗ್ಡಮ್​, ಜಪಾನ್ ಮತ್ತು ನೆದರ್​ಲ್ಯಾಂಡ್ಸ್ ತಮ್ಮ ವಾಯು ಗಡಿಯನ್ನ ಬಂದ್ ಮಾಡಿವೆ. ಸಿಂಗಾಪುರ್, ಇಟಲಿ, ಫ್ರಾನ್ಸ್ ಮತ್ತು ಇಸ್ರೇಲ್​ ದೇಶಗಳು ಈ ಮೊಜಾಂಬಿಕ್​ ಅನ್ನ ಕೂಡ ಈ ಲಿಸ್ಟ್​ಗೆ ಸೇರಿಸಿವೆ. ಹಾಗಿದ್ರೆ ಭಾರತ ಏನು ಮಾಡುತ್ತೆ ಅಂತ ಕೇಳಿದ ಪ್ರಶ್ನೆಗೆ ವಿದೇಶಾಂಗ ಇಲಾಖೆ ವಕ್ತಾರ Arindam Bagchi, ಇದಿನ್ನೂ ಡೆವಲಪಿಂಗ್ ಇನ್ಸಿಡೆಂಟ್.. ಅಂದ್ರೆ ಇನ್ನೂ ಹೊಸ ವಿಚಾರ.. ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ ಅಂತ ನೋಡಿದ್ದೀವಿ. ಸದ್ಯ ನಾವು ಯಾವೆಲ್ಲಾ ಕ್ರಮ ಕೈಗೊಂಡಿದ್ದೀವಿ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಹೊಸ ತಳಿ ಕಾಣಿಸಿಕೊಂಡಿರೋ ವಿಚಾರದ ಬಗ್ಗೆ ಆರೋಗ್ಯ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಹೆಚ್ಚು ಗಮನಹರಿಸುತ್ತೆ ಎಂದಿದ್ದಾರೆ. ಇನ್ನು ಡಿಸೆಂಬರ್ 8ನೇ ತಾರೀಖು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿದೆ. ಈಗ ಹೊಸ ವೇರಿಯಂಟ್​ ಟೆನ್ಷನ್​ ಹಿನ್ನೆಲೆ ಬಿಸಿಸಿಐ ಪರಿಸ್ಥಿತಿಯನ್ನ ಕ್ಲೋಸಾಗಿ ಮಾನಿಟರ್ ಮಾಡ್ತಿದೆ. ಇದೀಗ ಬಿಸಿಸಿಐ ಬಳಿ ಪ್ರತಿಕ್ರಿಯೆ ಕೇಳಲಿದ್ದೇವೆ ಅಂತಾನೂ ಅರಿಂದಮ್​ ಬಗ್ಚಿ ಹೇಳಿದ್ದಾರೆ.

ಇನ್ನು ಕೊರೋನಾದ ಹೊಸ ತಳಿ ಬಗ್ಗೆ ಏಮ್ಸ್​ನ ವೈದ್ಯರಾದ ಡಾ. ಸಂಜಯ್​ ರೈ ಮಾತನಾಡಿ, ಇದು ಹೊಸ ವೇರಿಯಂಟ್​.. ಇದು ಎಷ್ಟು ವೇಗವಾಗಿ ಹರಡುತ್ತೆ ಅನ್ನೋ ಬಗ್ಗೆ ಗೊತ್ತಿಲ್ಲದೇ ಇರೋದ್ರಿಂದ ಕಾದು ನೋಡ್ಬೇಕಾಗುತ್ತೆ. ನಾವು ಲಸಿಕೆ ಹಾಕ್ಕೊಂಡು ಇಮ್ಯುನಿಟಿ ಪಡೆದಿದ್ರೂ ಮತ್ತು ನ್ಯಾಚುರಲ್ಲಾಗಿ ಕೊರೋನಾ ವಿರುದ್ಧ ರೋಗ ನಿರೋಧಕ ಶಕ್ತಿ ಈ ಹೊಸ ತಳಿ ವಿರುದ್ಧ ಕೆಲಸ ಮಾಡದೇ ಇರಬಹುದು. ಒಂದ್ವೇಳೆ ರೋಗ ನಿರೋಧಕ ಶಕ್ತಿಯನ್ನ ಬೈಪಾಸ್​ ಮಾಡೋ ವೇರಿಯಂಟ್​ ಇದಾಗಿದ್ರೆ ನಿಜಕ್ಕೂ ಗಂಭೀರ ವಿಚಾರ ಅಂತ ಹೇಳಿದ್ದಾರೆ.

ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್​ ಲಿಂಡ್​​ಮೀರ್​ ಮಾತನಾಡಿ, ಆರಂಭಿಕ ಅಧ್ಯಯನಗಳ ಪ್ರಕಾರ ಹೊಸ ತಳಿ ದೊಡ್ಡ ಸಂಖ್ಯೆಯಲ್ಲಿ ರೂಪ ಬದಲಿಸಿದೆ. ಹೀಗಾಗಿ ಅದರ ಹೆಚ್ಚಿನ ಅಧ್ಯಯನ ನಡೆಯಬೇಕು. ಹೊಸ ತಳಿ ನಮ್ಮ ಮೇಲೆ ಎಷ್ಟು ಇಂಪ್ಯಾಕ್ಟ್ ಮಾಡುತ್ತೆ ಅನ್ನೋದನ್ನ ಹೇಳಲು ನಮ್ಗೆ ಕೆಲ ವಾರಗಳ ಟೈಂ ಬೇಕಾಗಬಹುದು. ಸಂಶೋಧಕರು ಹೊಸ ತಳಿ ಬಗ್ಗೆ ಇನ್ನಷ್ಟು ವಿಚಾರಗಳನ್ನ ತಿಳಿದುಕೊಳ್ಳೋದ್ರಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.

ಅಂದ್ಹಾಗೆ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಜನಸಂಖ್ಯೆ ಇರೋ ಗೌಟೆಂಗ್ ಪ್ರಾಂತ್ಯದಲ್ಲಿ ಈ ಹೊಸ ತಳಿಯ ಹೆಚ್ಚೆಚ್ಚು ಕೇಸ್​​ಗಳು ವರದಿಯಾಗ್ತಿವೆ. ಜೋಹಾನೆಸ್​​ಬರ್ಗ್​ ಈ ಪ್ರಾಂತ್ಯದ ರಾಜಧಾನಿ. ಇನ್ನು ದಕ್ಷಿಣ ಆಫ್ರಿಕಾದಲ್ಲಿ ಎರಡೂ ಡೋಸ್​ ಕೊರೋನಾ ಲಸಿಕೆ ಹಾಕಿಂಡೋರರ ಸಂಖ್ಯೆ ಜಸ್ಟ್ 24 ಪರ್ಸೆಂಟ್​. ಹೀಗಾಗಿ ಹೊಸ ತಳಿಯ ಕೇಸ್​​ಗಳು ವೇಗವಾಗಿ ಹರಡಬಹುದು ಅಂತ ತಜ್ಞರು ಎಚ್ಚರಿಸಿದ್ದಾರೆ. ಹಾಂಗ್​ ಕಾಂಗ್​​ನಲ್ಲಿ ಏನಾಗಿದ್ರೆ ಅಂದ್ರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯನ್ನ ಹೋಟೆಲ್​​ನಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. ಆದ್ರೂ ಹೋಟೆಲ್​ಗೆ ಬಂದ ಮತ್ತೊಬ್ಬ ಗೆಸ್ಟ್​ನಲ್ಲಿ ಈ ಹೊಸ ತಳಿ ಪತ್ತೆಯಾಗಿದೆ. ಇಬ್ಬರೂ ಕೂಡ ಎರಡೂ ಡೋಸ್​ ಲಸಿಕೆ ಹಾಕ್ಕೊಂಡಿದ್ರೂ ಹೀಗಾಗಿದೆ. ಇಸ್ರೇಲ್​, ಬೋಟ್ಸ್​ವಾನಾದಲ್ಲೀ ದಕ್ಷಿಣ ಆಫ್ರಿಕಾದ ಹೊಸ ತಳಿ ಪತ್ತೆಯಾಗಿದೆ.

ಕೊರೋನಾದ ಹೊಸ ತಳಿಯ ಆತಂಕದಿಂದ ಮತ್ತು ಯುರೋಪಿನ ಕೆಲವೊಂದು ದೇಶಗಳಲ್ಲಿ ಹೊಸ ತಳಿಗೆ ಹೆದರಿ ನಿರ್ಬಂಧಗಳನ್ನ ಮತ್ತೆ ಜಾರಿಗೆ ತಂದಿರೋದ್ರಿಂದ ಇವತ್ತು ಷೇರುಪೇಟೆ ಕೊಲ್ಯಾಪ್ಸ್ ಆಗಿದೆ. ಇವತ್ತು ಬರೋಬ್ಬರಿ 1,688 ಅಂಕ ಕುಸಿದ ಸೆನ್ಸೆಕ್ಸ್ 57,107ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 510 ಅಂಕ ಇಳಿಕೆ ಕಂಡು 17,026 ಆಗಿದೆ. ಇಂಡಸ್​ಇಂಡ್​ ಬ್ಯಾಂಕ್​ ಟಾಪ್​ ಲೂಸರ್ ಎನಿಸಿಕೊಂಡಿದೆ. ಅದರ 6 ಪರ್ಸೆಂಟ್​ ಶೇರು ಕುಸಿದಿದೆ. ಉಳಿದಂತೆ ಮಾರುತಿ, ಟಾಟಾ ಸ್ಟೀಲ್​, ಎನ್​ಟಿಪಿಸಿ, ಬಜಾಜ್ ಫೈನಾನ್ಸ್, ಹೆಚ್​​ಡಿಎಫ್​ಸಿ ಇತರ ಟಾಪ್ ಲೂಸರ್ಸ್​ ಎನಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply