100 ದಿನದ ಯುದ್ಧ: 20% ಯುಕ್ರೇನ್‌ ಈಗ ರಷ್ಯಾ ವಶದಲ್ಲಿ!

masthmagaa.com:

ಯುಕ್ರೇನ್‌ ಯುದ್ದ 100 ದಿನ ಪೂರೈಸುತ್ತಿದ್ದಂತೆಯೇ ಯುಕ್ರೇನ್‌ನ 20% ಭಾಗ ಈಗ ರಷ್ಯಾ ವಶದಲ್ಲಿದೆ ಅನ್ನೋದು ಗೊತ್ತಾಗಿದೆ. ಯುಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಇದನ್ನ ಬಹಿರಂಗಪಡಿಸಿದ್ದು, ಈ ಹಿಂದೆ 2014ರಲ್ಲಿ ವಶಪಡಿಸಿಕೊಂಡಿದ್ದ ಕ್ರೈಮಿಯಾ ಮತ್ತು ಡಾನ್‌ಬಾಸ್‌ನ ಕೆಲ ಪ್ರದೇಶಗಳು ಕೂಡ ಇದ್ರಲ್ಲಿ ಸೇರಿದೆ ಎನ್ನಲಾಗಿದೆ. ಇನ್ನು ಲುಗಾನ್ಸ್ಕ್‌ನ ಸೆವೆರೋಡೊನೆಟ್ಸ್ಕ್‌ನಲ್ಲಿ ಕಾಳಗ ಮುಂದುವರೆದಿದದ್ದು ರಷ್ಯಾ 80% ನಗರವನ್ನ ತನ್ನ ಕಂಟ್ರೋಲ್‌ಗೆ ತಗೊಂಡಿದೆ, 20% ಭಾಗದಲ್ಲಿ ಮಾತ್ರ ಯುಕ್ರೇನ್‌ ಪಡೆಗಳು ತೀವ್ರ ಪ್ರತಿರೋಧ ಒಡ್ತಾ ಇವೆ.

-masthmagaa.com

Contact Us for Advertisement

Leave a Reply