ಟಾಟಾ ಸ್ಟೀಲ್‌ ಪ್ಲಾಂಟ್‌ನಲ್ಲಿದ್ದ 110 ಮೀಟರ್‌ ಚಿಮಣಿ 11 ಸೆಕೆಂಡ್‌ಗಳಲ್ಲಿ ನೆಲಸಮ!

masthmagaa.com:

ಜೆಮ್‌ಶೆಡ್‌ಪುರದಲ್ಲಿ ಟಾಟಾ ಸ್ಟೀಲ್‌ ಪ್ಲಾಂಟ್‌ನಲ್ಲಿದ್ದ 110 ಮೀಟರ್‌ ಎತ್ತರದ ಚಿಮಣಿಯನ್ನ 11 ಸೆಕೆಂಡ್‌ಗಳಲ್ಲಿ ನೆಲಸಮ ಮಾಡಲಾಗಿದೆ. ಕಂಪನಿ ತನ್ನ ಹಳೆ ಪ್ಲಾಂಟ್‌ಗಳನ್ನ ತೆಗೆದು ಹೊಸದಾಗಿ ಪ್ಲಾಂಟ್‌ ನಿರ್ಮಿಸೋಕೆ ಮುಂದಾಗಿದ್ದು, 27 ವರ್ಷ ಹಳೆ ಚಿಮಣಿಯನ್ನ ಸುರಕ್ಷಿತ ಮತ್ತು ಪರಿಸರ ಸ್ನೇಹಿ ಸ್ಫೋಟವನ್ನ ಬಳಸಿ ಬೀಳಿಸಲಾಗಿದೆ ಅಂತ ಟಾಟಾ ಸ್ಟೀಲ್‌ ಪ್ಲಾಂಟ್‌ನ ಉಪಾಧ್ಯಾಕ್ಷ ಅವನೀಶ್‌ ಗುಪ್ತಾ ತಿಳಿಸಿದ್ದಾರೆ. ಅಂದ್ಹಾಗೆ ಜೆ ಡೆಮೊಲಿಷನ್‌ ಕಂಪನಿ ಬೆಂಬಲಿತ ಎಡಿಫೈಸ್‌ ಇಂಜಿನಿಯರಿಂಗ್‌ ಇಂಡಿಯಾಕ್ಕೆ ಈ ಕೆಲಸವನ್ನ ವಹಿಸಲಾಗಿತ್ತು. ಇದೇ ಕಂಪನಿ ಆಗಸ್ಟ್‌ 28ರಂದು ನೋಯ್ಡಾದಲ್ಲಿ ಟ್ವಿನ್‌ ಟವರ್‌ ಅನ್ನು ಕೆಲವೇ ಸೆಕೆಂಡ್‌ಗಳಲ್ಲಿ ನೆಲಸಮ ಮಾಡಿತ್ತು.

masthmagaa.com

Contact Us for Advertisement

Leave a Reply