ಜಡ್ಜ್ ಆಯ್ಕೆಗೆ ನಡೆದ ಪರೀಕ್ಷೆಯಲ್ಲಿ ಜಡ್ಜ್‍ಗಳೇ ಫೇಲ್..!

ಗುಜರಾತ್‍ನ ಹೈಕೋರ್ಟ್  40 ಮಂದಿ ಜಿಲ್ಲಾ ನ್ಯಾಯಾಧೀಶರ ಆಯ್ಕೆಗಾಗಿ ಲಿಖಿತ ಪರೀಕ್ಷೆ ನಡೆಸಿತ್ತು. ಇದರಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಜಡ್ಜ್‍ಗಳು ಮತ್ತು ವಕೀಲರು ಭಾಗಿಯಾಗಿದ್ದರು. ಆಶ್ಚರ್ಯ ಅಂದ್ರೆ 119 ಮಂದಿ ನ್ಯಾಯಾಧೀಶರು ಮತ್ತು 1372 ಮಂದಿ ವಕೀಲರು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

ಪರೀಕ್ಷೆಯಲ್ಲಿ ಒಟ್ಟು 119 ಮಂದಿ ನ್ಯಾಯಾಧೀಶರು ಭಾಗಿಯಾಗಿದ್ದರು. ಅವರಲ್ಲಿ 51 ಮಂದಿ ನ್ಯಾಯಾಧೀಶರು ಗುಜರಾತ್‍ನ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 40 ಹುದ್ದೆಗಳಲ್ಲಿ 26 ಮಂದಿ ಹಿರಿಯ ವಕೀಲರು ಮತ್ತು 14 ಸ್ಥಾನ ಸ್ಥಳೀಯ ಕೋರ್ಟ್‍ಗಳ ಜಡ್ಜ್‍ಗಳಿಂದ ತುಂಬಬೇಕಿತ್ತು. ಆದ್ರೆ ವಿಪರ್ಯಾಸ ಅಂದ್ರೆ ಇಷ್ಟು ಜನರಲ್ಲಿ ಒಬ್ಬರೂ ಸಹ ಲಿಖಿತ ಪರೀಕ್ಷೆಯನ್ನು ಪಾಸ್ ಮಾಡಲು ಸಾಧ್ಯವಾಗಿಲ್ಲ. ಎಲ್ಲರೂ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

Contact Us for Advertisement

Leave a Reply