ದೇಶದಲ್ಲಿ 120, ರಾಜ್ಯದಲ್ಲಿ 20 ಉಗ್ರರು..! RSS ನಾಯಕರೇ ಟಾರ್ಗೆಟ್​​..!

ದೇಶದಲ್ಲಿ 120ಕ್ಕೂ ಹೆಚ್ಚು ಜೆಎಂಬಿ ಉಗ್ರರು ಸಕ್ರಿಯರಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳದ ಡಿಜಿ ಯೋಗೇಶ್ ಚಂದರ್ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಬಿಹಾರ, ಕರ್ನಾಟಕ, ದೆಹಲಿ, ಕೇರಳದಲ್ಲಿ ಫುಲ್ ಆ್ಯಕ್ಟೀವ್ ಆಗಿವೆ. ಈ ಬಗ್ಗೆ 125 ಶಂಕಿತರ ಹೆಸರು ಮತ್ತು ವಿಳಾಸವನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ನೀಡಿದ್ದೇವೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್​​ಐಎ ಐಜಿ ಅಲೋಕ್ ಮಿತ್ಥಲ್​​, ಕರ್ನಾಟಕದ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಉಗ್ರರು ಸಕ್ರಿಯರಾಗಿದ್ದು, ದಾಳಿಗೆ ಸಂಚು ರೂಪಿಸಿದ್ದಾರೆ. ಅದರಲ್ಲೂ ಆರ್​ಎಸ್​ಎಸ್​ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ

 

Contact Us for Advertisement

Leave a Reply