ಪಾಕ್‌ ಉಗ್ರದಾಳಿಯನ್ನ ವಿಫಲಗೊಳಿಸದ ಮೊಸಾದ್!‌ ಯಾವುದನ್ನೂ ಸಹಿಸಲ್ಲ ಎಂದ ಇಸ್ರೇಲ್‌!

masthmagaa.com:

ಗ್ರೀಸ್‌ ದೇಶದಲ್ಲಿ ಪಾಕ್‌ ಉಗ್ರರು ನಡೆಸಲಿದ್ದ ದೊಡ್ಡ ಉಗ್ರ ದಾಳಿಯನ್ನ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ ಹಾಗೂ ಗ್ರೀಸ್‌ ಪೊಲೀಸರು ವಿಫಲಗೊಳಿಸಿದ್ದಾರೆ. ಯಹೂದಿಗಳನ್ನ ಗುರಿಯಾಗಿಸಿಕೊಂಡು ಪಾಕ್‌ ಉಗ್ರರು ದಾಳಿ ನಡೆಸಲಿದ್ರು. ಆದ್ರೆ ಮೊಸಾದ್‌ ಕೊಟ್ಟ ಇಂಟಲಿಜೆನ್ಸ್‌ ಮಾಹಿತಿಯ ಆಧಾರದ ಮೇಲೆ ಗ್ರೀಸ್‌ ಇಂಟಲಿಜೆನ್ಸ್‌ ಹಾಗೂ ಅಲ್ಲಿನ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಉಗ್ರರ ಪ್ಲಾನ್‌ ಅನ್ನ ಫ್ಲಾಪ್‌ ಮಾಡಿವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಪಾಕ್‌ ಪ್ರಜೆಗಳನ್ನ ಬಂಧಿಸಲಾಗಿದೆ. ತನಿಖೆಯಲ್ಲಿ ಇವರ ಗುರು ಅಥವಾ ದಾಳಿಯ ಮಾಸ್ಟರ್‌ ಮೈಂಡ್‌ ಇರಾನ್‌ನಲ್ಲಿ ವಾಸ ಮಾಡ್ತಾ ಇದಾನೆ. ಅವನೂ ಪಾಕಿಸ್ತಾನದ ಪ್ರಜೆ ಅಂತ ಗೊತ್ತಾಗಿದೆ. ಯಹೂದಿಗಳು ವಾಸ ಮಾಡ್ತಿದ್ದ ರೆಸ್ಟೋರೆಂಟ್‌ ಸೇರಿ ಅನೇಕ ಸ್ಥಳಗಳನ್ನ ಟಾರ್ಗೆಟ್‌ ಮಾಡುವಂತೆ ಆತ ಆದೇಶ ಕೊಟ್ಟಿದ್ದ. ಜನನಿಬಿಡ ಪ್ರದೇಶಗಳ ಮೇಲೆ ಇವರು ಸಧ್ಯದಲ್ಲೇ ದೊಡ್ಡ ದಾಳಿಗೆ ಯೋಜನೆ ರೂಪಿಸಿದ್ರು. ನಾಗರಿಕರನ್ನ ಟಾರ್ಗೆಟ್‌ ಮಾಡೋದ್ರ ಜೊತೆಗೆ ಗ್ರೀಸ್‌ನ ಶಾಂತಿಯನ್ನ ಹಾಳು ಮಾಡೋ ಉದ್ದೇಶ ಕೂಡ ಇತ್ತು ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ. ಅಲ್ದೇ ಗ್ರೀಸ್‌ನಲ್ಲಿರೋ ಯುವಕರನ್ನ ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳೋ ಟಾಸ್ಕ್‌ ಕೂಡ ನೀಡಲಾಗಿತ್ತು. ಆದ್ರೆ ಆ ನೆಟ್‌ವರ್ಕ್‌ನ್ನ ಕತ್ತರಿಸಿದ್ದೀವಿ ಅಂತ ಗ್ರೀಸ್‌ ಪೊಲೀಸರು ಹೇಳಿದ್ದಾರೆ. ಇದ್ರ ಬೆನ್ನಲ್ಲೇ ಇಸ್ರೇಲ್‌ನ ವಿದೇಶಾಂಗ ಇಲಾಖೆ ಕೂಡ ಹೇಳಿಕೆ ಬಿಡುಗಡೆ ಮಾಡಿದೆ. ಇರಾನ್‌ನಲ್ಲಿರೋ ಅಯತೊಲ್ಲಾಹ್‌ ಅಲಿ ಖಮೇನಿ ಸರ್ಕಾರ ಇಡೀ ವಿಶ್ವಕ್ಕೆ ಭಯೋತ್ಪಾದನೆಯನ್ನ ಎಕ್ಸ್‌ಪೋರ್ಟ್‌ ಮಾಡ್ತಿದೆ. ಅವರ ಯೋಜನೆಯನ್ನ ವಿಫಲಗೊಳಿಸಬೇಕು ಅಂದ್ರೆ ನಾವು ಜೊತೆಯಾಗಿ ಕೈ ಜೋಡಿಸಲೇಬೇಕು. ಅದೇ ನಮ್ಮ ಮೊದಲ ಉದ್ದೇಶ. ಈ ಕಾರ್ಯಚರಣೆಗೆ ಮೊಸದ್‌ ಹೆಲ್ಪ್‌ ಮಾಡಿದೆ. ಇಸ್ರೇಲಿಗಳ ಮೇಲೆ ಯಹೂದಿಗಳ ಮೇಲೆ ದಾಳಿ ಮಾಡುವುದನ್ನ ನಾವು ಸಹಿಸಲ್ಲ. ದಾಳಿ ಯತ್ನವನ್ನ ವಿಫಲಗೊಳಿಸಿದ್ದಕ್ಕೆ ಗ್ರೀಸ್‌ ಸರ್ಕಾರಕ್ಕೆ ನಾವು ಅಭಿನಂದನೆ ಸಲ್ಲಿಸ್ತೇವೆ ಅಂತ ಇಸ್ರೇಲ್‌ ಹೇಳಿಕೆ ಬಿಡುಗಡೆ ಮಾಡಿದೆ. ಅಂದ್ಹಾಗೆ ಗ್ರೀಸ್‌ನಲ್ಲಿ ಯಹೂದಿಗಳು ದೊಡ್ಡ ಪ್ರಮಾಣದಲ್ಲೇ ವಾಸ ಮಾಡ್ತಿದ್ದು ಗ್ರೀಸ್‌ ಹಾಗೂ ಇಸ್ರೇಲ್‌ ನಡುವಿನ ಸಂಬಂಧ ತುಂಬಾ ಚೆನ್ನಾಗಿದೆ. ಈ ಕಡೆ ಇಸ್ರೇಲ್‌ ವಿರೋಧಿಗಳಾದ ಟರ್ಕಿ, ಇರಾನ್‌ ಹಾಗೂ ಪಾಕಿಸ್ತಾನದ ಜೊತೆಗೆ ಗ್ರೀಸ್‌ ಸಂಬಂಧ ಹಾಳಾಗಿದೆ. ಅದ್ರಲ್ಲೂ ಟರ್ಕಿ ಹಾಗೂ ಗ್ರೀಸ್‌ಗಳು ಅನೇಕ ವಿಚಾರಕ್ಕೆ, ಅದು ಕರಾವಳಿ ವಿಚಾರಕ್ಕೆ ಇರಬೋದು, ಸೈಪ್ರೆಸ್‌ ವಿಚಾರಕ್ಕೆ ಇರಬೋದು ಒಬ್ರಿಗೊಬ್ರು ಆ ಜನ್ಮ ಶತ್ರುಗಳಂತೆ ಕಿತ್ತಾಡ್ತಾ ಇರ್ತಾರೆ. ಅಗಾಗ ಅದು ಅತಿರೇಕಕ್ಕೂ ಹೋಗುತ್ತೆ. ಈ ಉದ್ವಿಗ್ನತೆ ನಡುವಲ್ಲೇ ಇರಾನ್‌ ಹಾಗೂ ಪಾಕ್‌ ಮೂಲದ ಭಯೋತ್ಪಾದಕ ಜಾಲಗಳು ಗ್ರೀಸ್‌ನಲ್ಲಿ ಪತ್ತೆಯಾಗಿವೆ. ಹೀಗಾಗಿ ಈ ಎರಡೂ ಬಣಗಳ ಸಂಬಂಧದ ಮೇಲೆ ಮತ್ತಷ್ಟು ನೆಗಿಟಿವ್‌ ಪರಿಣಾಮ ಬೀರಬೋದು ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಇನ್ನು ಈ ಕಡೆ ಪೋರ್ಚುಗಲ್‌ನ ಲಿಸ್ಬನ್‌ ನಗರದಲ್ಲಿ ಭಯೋತ್ಪಾದಕ ದಾಳಿಯಾಗಿದೆ. ಚಾಕುವಿನಿಂದ ದಾಳಿ ಮಾಡಲಾಗಿದ್ದು 2 ಪ್ರಾಣ ಬಿಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಹಂತಕರನ್ನ ಅಫ್ಘಾನಿಸ್ತಾನದಿಂದ ಬಂದ ನಿರಾಶ್ರಿತರು ಅಂತ ಗುರುತಿಸಲಾಗಿದೆ.

-masthmagaa.com

Contact Us for Advertisement

Leave a Reply