ಕ್ಸಿ ಜಿನ್‍ಪಿಂಗ್ ವಿಶೇಷ ಸ್ವಾಗತಕ್ಕೆ 2000 ಮಕ್ಕಳ ಸಿದ್ಧತೆ..!

ನಾಳೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವನರನ್ನು ಸ್ವಾಗತಿಸಲು ಚೆನ್ನೈನ ಶಾಲೆಯೊಂದರ 2000 ಸಾವಿರ ಮಕ್ಕಳು ಅಭ್ಯಾಸ ಮಾಡಿದ್ದಾರೆ. ಕ್ಸಿ ಜಿನ್ ಪಿಂಗ್ ಅವರ ಮುಖವಾಡ ಧರಿಸಿರುವ ಈ ಮಕ್ಕಳು ಚೀನೀ ಭಾಷೆಯ ಅಕ್ಷರವೊಂದನ್ನು ವಿನ್ಯಾಸ ಮಾಡಿದ್ದಾರೆ. ಮೇಲ್ಭಾಗದಲ್ಲಿ ಇಂಗ್ಲಿಷ್ ನಲ್ಲಿ ಹಾರ್ಟ್ಲಿ ವೆಲ್ಕಮ್ ಅಂದ್ರೆ ಹೃದಯಪೂರ್ವಕ ಸ್ವಾಗತ ಎಂದು ಬರೆಯಲಾಗಿದೆ. ಇನ್ನೊಂದು ವಿಶೇಷ ಅಂದ್ರೆ ಈ ಬಾರಿ ನೇರವಾಗಿ ಚೆನ್ನೈಗೆ ಬರಲಿರುವ ಕ್ಸಿ ಜಿನ್ ಪಿಂಗ್ ಅಲ್ಲೇ ದಿನವಿಡೀ ಕಳೆಯಲಿದ್ದಾರೆ. ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಮಹಾಬಲಿ ಪುರಂನಲ್ಲಿ ಭೇಟಿಯಾಗಲಿದ್ದಾರೆ.

Contact Us for Advertisement

Leave a Reply