RRR ಸಿನಿಮಾದ ಪ್ರಶಸ್ತಿ ಬೇಟೆ! ಒಲಿದು ಬಂದ ಮತ್ತೆರೆಡು ಪ್ರಶಸ್ತಿಗಳು!

masthmagaa.com:

ಎಸ್‌ ಎಸ್‌ ರಾಜಮೌಳಿ ನಿರ್ದೇಶನದ RRR ಸಿನಿಮಾ ತನ್ನ ಪ್ರಶಸ್ತಿ ಬೇಟೆಯನ್ನ ಮುಂದುವರೆಸಿದೆ. ಇದೀಗ ʻಅತ್ಯುತ್ತಮ ವಿದೇಶಿ ಭಾಷೆಯ ಚಿತ್ರʼ ವಿಭಾಗದಲ್ಲಿ 28ನೇ ವಿಮರ್ಶಕರ ಪ್ರಶಸ್ತಿ (Best critic award)ನ್ನ RRR ಗೆದ್ದಿದೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ Critics Choice Awards ಸಮಾರಂಭದಲ್ಲಿ RRR ಈ ಸಾಧನೆ ಮಾಡಿದೆ. ಇದರ ಜೊತೆಗೆ ʻನಾಟು ನಾಟುʼ ಸಾಂಗ್‌ ಅತ್ಯುತ್ತಮ ಮೂಲ ಗೀತೆ ಅಥ್ವಾ ಬೆಸ್ಟ್‌ ಒರಿಜಿನಲ್‌ ಸಾಂಗ್‌ ಪ್ರಶಸ್ತಿಯನ್ನ ಪಡೆದುಕೊಂಡಿದೆ. ಅಂದ್ಹಾಗೆ ಇತ್ತೀಚೆಗೆ RRR ಗೋಲ್ಡನ್‌ ಗ್ಲೋಬ್‌ ಅವಾರ್ಡ್‌ನಲ್ಲಿ ನಾಟು ನಾಟು ಸಾಂಗ್‌ ಬೆಸ್ಟ್‌ ಒರಿಜಿನಲ್‌ ಸಾಂಗ್‌ ಪ್ರಶಸ್ತಿಯನ್ನ ಗೆದ್ದಿತ್ತು.

-masthmagaa.com

Contact Us for Advertisement

Leave a Reply