ಭೀಕರ ಅಪಘಾತದಲ್ಲಿ 35 ಮಂದಿ ವಿದೇಶಿಗರ ದುರ್ಮರಣ

ಸೌದಿ: ಬಸ್ಸೊಂದು ಭಾರಿ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 35 ಮಂದಿ ವಿದೇಶಿಗರು ಸಾವನ್ನಪ್ಪಿದ ಘಟನೆ ಸೌದಿ ಅರೇಬಿಯಾದ ಪವಿತ್ರ ಸ್ಥಳ ಮದೀನಾ ಬಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅಲ್ ಹಮ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಅರಬ್ ಮತ್ತು ಏಷ್ಯಾ ಮೂಲದ ಯಾತ್ರಾರ್ಥಿಗಳು ಎಂದು ತಿಳಿದು ಬಂದಿದೆ.

2018ರಲ್ಲಿ ಇದೇ ರೀತಿ ಬ್ರಿಟನ್ ಮೂಲದ ಪ್ರಯಾಣಿಕರಿದ್ದ ಬಸ್ಸೊಂದು ತೈಲ ಟ್ಯಾಂಕರ್​​ಗೆ ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ನಾಲ್ವರು ಬ್ರಿಟನ್ ಪ್ರಜೆಗಳು ಸಾವನ್ನಪ್ಪಿ. 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಅವರೂ ಸಹ ಮೆಕ್ಕಾಗೆ ಹೊರಟಿದ್ದರು ಎಂದು ತಿಳಿದು ಬಂದಿತ್ತು.

2017ರಲ್ಲಿ ನಡೆದ ಅಪಘಾತದಲ್ಲಿ 2 ತಿಂಗಳ ಮಗು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದರು. ಕಳೆದ ತಿಂಗಳಷ್ಟೇ ಸೌದಿಯಲ್ಲಿ ಪ್ರವಾಸಿಗರಿಗೂ ವೀಸಾ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು.

Contact Us for Advertisement

Leave a Reply