masthmagaa.com:

ಇನ್ನು ದೇಶದ ವಿಚಾರಕ್ಕೆ ಬಂದ್ರೆ ಕಳೆದ 24 ಗಂಟೆಗಳಲ್ಲಿ 38,164 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು. 499 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿ 11 ಲಕ್ಷದ 44 ಸಾವಿರ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 4,14,108 ಆಗಿದೆ.

ಕಳೆದ 24 ಗಂಟೆಗಳಲ್ಲಿ 38,660 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 3 ಕೋಟಿ 03 ಲಕ್ಷದ 08 ಸಾವಿರ ದಾಟಿದೆ. ದೇಶದಲ್ಲಿ ಇನ್ನೂ ಕೂಡ 4 ಲಕ್ಷದ 21 ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 97.32 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.33 ಪರ್ಸೆಂಟ್ ಇದೆ. ದೇಶದಲ್ಲಿ ನಿನ್ನೆ 14.63 ಲಕ್ಷ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 44.54 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ.

ದೇಶದಲ್ಲಿ ನಿನ್ನೆ 13.63 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು, ಇದುವರೆಗೆ ಒಟ್ಟು 40.64 ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಿದಂತಾಗಿದೆ.

-masthmagaa.com

Contact Us for Advertisement

Leave a Reply