ಪಂಜಾಬ್‌: ವ್ಯಕ್ತಿ ಮೇಲೆ 4 ಜನ ಮಹಿಳೆಯರಿಂದ ಅತ್ಯಾಚಾರ

masthmagaa.com:

ಫ್ಯಾಕ್ಟರಿ ಒಂದ್ರಲ್ಲಿ ಕೆಲಸ ಮಾಡೋ ವ್ಯಕ್ತಿಯೊಬ್ಬನನ್ನು 4 ಜನ ಯುವತಿಯರು ಅಪಹರಿಸಿ ಅತ್ಯಾಚಾರ ಮಾಡಿದ ಶಾಕಿಂಗ್ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ಹೋಗೋ ವೇಳೆ ಕಾರಿನಲ್ಲಿದ್ದ 4 ಜನ ಮಹಿಳೆಯರು ಅಡ್ರೆಸ್‌ ಕೇಳೋ ನೆಪದಲ್ಲಿ ನನ್ನನ್ನು ನಿಲ್ಲಿಸಿ, ನಂತರ ಕಣ್ಣಿಗೆ ಕೆಮಿಕಲ್‌ ಸ್ಪ್ರೇ ಮಾಡಿದ್ರು. ಬಳಿಕ ಕಾಡಿಗೆ ಕರೆದುಕೊಂಡು ಹೋಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತ್ರ ಬೆಳಗ್ಗೆ ಸುಮಾರು 3 ಗಂಟೆ ವೇಳೆ ರಸ್ತೆ ಮೇಲೆ ಬಿಟ್ಟು ಹೋಗಿದ್ದಾರೆ ಅಂತ ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾನೆ. ಆದರೆ ಈ ಘಟನೆ ಬಗ್ಗೆ ವ್ಯಕ್ತಿ ಕೇಸ್‌ ದಾಖಲಿಸಿಲ್ಲ ಕೇವಲ ಮಾಧ್ಯಗಳ ಮುಂದೆ ಹೇಳಿಕೆ ನೀಡಿದ್ದಾನೆ. ಆದ್ರೆ ಪಂಜಾಬ್‌ ಪೊಲೀಸ್‌ ಗುಪ್ತಚರ ಇಲಾಖೆ ಈ ವಿಷಯವಾಗಿ ಸ್ವಯಂ ಪ್ರೇರಿತ ಕೇಸ್‌ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿರೊದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply