ಎಸ್‌ಪಿ ನಾಯಕನ ಮಗಳ ಜೊತೆಗೆ ಓಡಿ ಹೋದ ಬಿಜೆಪಿ ಮುಖಂಡ! ಪಕ್ಷದಿಂದಲೇ ಉಚ್ಚಾಟನೆ ಮಾಡಿದ BJP

masthmagaa.com:

ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಮುಖಂಡರೊಬ್ರು ಅಲ್ಲಿನ ಸಮಾಜವಾದಿ ಪಕ್ಷದ ನಾಯಕರ ಮಗಳಿಗೆ ಆಮಿಷವೊಡ್ಡಿ, ಕರ್ಕೊಂಡು ಓಡಿಹೋಗಿದ್ದಾರೆ ಅಂತ ಆರೋಪಿಸಲಾಗಿದೆ. ಆರೋಪಿಯನ್ನ ಹರ್ದೋಯ್ ಘಟಕದ ಬಿಜೆಪಿ ಕಾರ್ಯದರ್ಶಿ 45 ವರ್ಷದ ಆಶಿಶ್ ಶುಕ್ಲಾ ಅಂತ ಗುರ್ತಿಸಲಾಗಿದೆ. ಈತ ಮದುವೆ ಕೂಡ ಆಗಿದ್ದ ಅಂತ ಹೇಳಲಾಗಿದ್ದು, ಸ್ಥಳೀಯ ಎಸ್‌ಪಿ ನಾಯಕನ 25 ವರ್ಷದ ಪುತ್ರಿಯ ಜೊತೆ ಈತ ಓಡಿಹೋಗಿದ್ದಾರೆ ಅಂತ ವರದಿಯಾಗಿದೆ. ಇದ್ರ ಬೆನ್ನಲ್ಲೇ ಶುಕ್ಲಾ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ.

-masthmagaa.com

Contact Us for Advertisement

Leave a Reply