ಚೀನಾದಲ್ಲಿ ಕೊರೊನಾ ಕೇಸ್‌ಗಳಲ್ಲಿ ಏರಿಕೆ : ಮತ್ತೆ 5 ದಿನ ಲಾಕ್‌ಡೌನ್‌

masthmagaa.com:

ಚೀನಾದ ಜೀರೋ ಕೋವಿಡ್‌ ನೀತಿಯ ವಿರುದ್ಧ ಅಲ್ಲಿನ ಜನ ಫಾಕ್ಸ್‌ಕಾನ್‌ ಐಫೋನ್‌ ಫ್ಯಾಕ್ಟರಿಯಲ್ಲಿ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಚೀನಾ ಮತ್ತೆ 5 ದಿನ ಲಾಕ್‌ಡೌನ್‌ ಘೋಷಿಸಿದೆ. ಫಾಕ್ಸ್‌ಕಾನ್‌ ಫ್ಯಾಕ್ಟರಿ ಇರೋ ಝೆಂಗ್ಜೌ ಸಿಟಿಯ ನಿವಾಸಿಗಳು ತಮ್ಮ ಏರಿಯಾ ಬಿಟ್ಟು ಹೋಗೋ ಹಾಗಿಲ್ಲ. ಹಾಗೇನಾದ್ರು ಹೋಗ್ಬೇಕು ಅಂದ್ರೆ ಕೋವಿಡ್‌ ನೆಗೆಟಿವ್‌ ಇರ್ಬೇಕು. ಜೊತೆಗೆ ಅಧಿಕಾರಿಗಳ ಪರ್ಮಿಷನ್‌ ತಗೋಬೇಕು ಅಂತ ಸರ್ಕಾರ ಹೇಳಿದೆ. ಇತ್ತ ಫಾಕ್ಸ್‌ಕಾನ್‌, ಬೋನಸ್‌ ಪೇಮೆಂಟ್‌ ಕೊಟ್ಟಿಲ್ಲ ಮತ್ತು ಕೊರೊನಾ ಸೋಂಕಿತರ ಜೊತೆಯಲ್ಲಿಯೇ ಇರುವಂತೆ ಒತ್ತಾಯಿಸಲಾಗ್ತಿದೆ ಅಂತ ಪ್ರತಿಭಟನೆ ವೇಳೆ ಉದ್ಯೋಗಿಗಳು ಆರೋಪಿಸಿದ್ರು. ಇದೀಗ ಟೆಕ್ನಿಕಲ್‌ ಪ್ರಾಬ್ಲಂನಿಂದ ಹಣ ಪಾವತಿ ಮಾಡೋಕೆ ಆಗಿಲ್ಲ ಅಂತ ಫಾಕ್ಸ್‌ಕಾನ್‌ ಉದ್ಯೋಗಿಗಳ ಬಳಿ ಕ್ಷಮೆ ಕೇಳಿದೆ. ಇನ್ನು ಕೋವಿಡ್‌ ನಿಯಂತ್ರಣಕ್ಕೆ ಚೀನಾ ಎಷ್ಟೇ ಹರಸಾಹಸ ಮಾಡಿದ್ರು ಕೇಸ್‌ಗಳು ಮಾತ್ರ ಕಡಿಮೆಯಾಗ್ತಿಲ್ಲ. ಒಂದೇ ದಿನದಲ್ಲಿ 30 ಸಾವಿರಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗಿವೆ ಅಂತ ಇಲ್ಲಿನ ಆರೋಗ್ಯ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply