ಸೊಮಾಲಿಯಾ ಆರ್ಮಿ ಕ್ಯಾಂಪ್‌ನಲ್ಲಿ ಶೂಟೌಟ್:‌ 5 ಬಲಿ!

masthmagaa.com:

ಸೊಮಾಲಿಯಾ ರಾಜಧಾನಿ ಮೊಗಡಿಶುನ ಮಿಲಿಟರಿ ಕ್ಯಾಂಪ್‌ ಒಂದರಲ್ಲಿ ಸೈನಿಕನೊಬ್ಬ ಏಕಾಏಕಿ ಇತರ ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಒಬ್ಬ UAE ಸೈನಿಕ ಸೇರಿದಂತೆ ಐವರು ಸೈನಿಕರು ಮೃತಪಟ್ಟಿದ್ದಾರೆ. ಮತ್ತಿಬ್ಬರಿಗೆ ಗಾಯಗಳಾಗಿವೆ. ಗೋರ್ಡನ್‌ ಆರ್ಮಿ ಬೇಸ್‌ನಲ್ಲಿ ನಡೆದ ಈ ಘಟನೆಯಲ್ಲಿ ಶೂಟೌಟ್‌ ನಡೆಸಿದ ಸೈನಿಕನೂ ಮೃತಪಟ್ಟಿದ್ದಾನೆ. ಅತ್ತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್‌ ಒಂದು ಕ್ರಾಶ್‌ ಆಗಿ 6 ಮಂದಿ ಅಸುನೀಗಿದ್ದಾರೆ. ಈ ಪೈಕಿ ನೈಜಿರಿಯಾ ಮೂಲದ ಅಕ್ಸೆಸ್‌ ಬ್ಯಾಂಕ್‌ನ ಸಿಇಒ ಹರ್ಬರ್ಟ್‌ ವಿಗ್ವೆ ಕೂಡ ಒಬ್ರು. ಕ್ಯಾಲಿಫೋರ್ನಿಯ ಬಳಿಯ ನಿಪ್ಟನ್‌ನಲ್ಲಿ ಈ ಘಟನೆ ನಡೆದಿದೆ.

-masthmagaa.com

Contact Us for Advertisement

Leave a Reply