ಅಬ್ಬಾ…9 ಅಡಿ ಉದ್ದದ ಹೆಬ್ಬಾವು..! ಹೇಗಿದೆ ನೋಡಿ…

ಗುಜರಾತ್‍ನಲ್ಲಿ 9 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಇಲ್ಲಿನ ವಡೋದರಾ ಜಿಲ್ಲೆಯ ವೆಜಲ್‍ಪುರ ಗ್ರಾಮದ ಮನೆಯೊಂದರಲ್ಲಿ ಹಾವು ಅಡಗಿಕೊಂಡಿತ್ತು. ಅಲ್ಲದೆ ಒಂದು ಬೆಕ್ಕನ್ನು ನುಂಗುತ್ತಿದ್ದ ಹಾವನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಎನ್‍ಜಿಒ ಒಂದರ ಸಹಾಯದಿಂದ ಹಾವನ್ನು ಹಿಡಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಮರದ ತುಂಡಿನ ರಾಶಿಯಲ್ಲಿ ಹೆಬ್ಬಾವು ಅಡಗಿಕೊಂಡಿತ್ತು. ಬೆಕ್ಕನ್ನು ನುಂಗಲು ಯತ್ನಿಸಿತ್ತಾದ್ರೂ, ಸಾಧ್ಯವಾಗದೇ ಉಗುಳಿದೆ ಅಂತ ಹೇಳಿದ್ದಾರೆ. ಸದ್ಯ ಹಾವು ಸೆರೆಹಿಡಿದ ಸಿಬ್ಬಂದಿ ಅರಣ್ಯಕ್ಕೆ ಬಿಟ್ಟಿದ್ದಾರೆ.

Contact Us for Advertisement

Leave a Reply