ರಾಜ್ಯದಲ್ಲಿ ಹಾಡಹಗಲೇ ಭಯಾನಕ ಕೊಲೆ ಯತ್ನ! ಈ ಭೀಕರ ಘಟನೆಗೆ ಸಾಕ್ಷಿಯಾಯ್ತು ಮಂಡ್ಯ ಜಿಲ್ಲೆ!

masthmagaa.com:

ಮಂಡ್ಯ ಜಿಲ್ಲೆಯಲ್ಲಿ ಹಾಡಹಗಲೇ ಭಯಾನಕ ಕೊಲೆಯತ್ನ ನಡೆದಿದೆ. ಮದ್ದೂರು ತಾಲ್ಲೂಕಿನ ಕಚೇರಿ ಆವರಣದಲ್ಲೇ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಗೆ ಮಾರಕಸ್ತಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದ್ದಾನೆ. ಇಬ್ರ ಮಧ್ಯೆ ಜಮೀನು ದ್ವೇಷ ಕಾರಣ ಅಂತ ಹೇಳಲಾಗ್ತಿದೆ. ದಾಳಿಗೊಳದವರನ್ನ 40ರಿಂದ 50 ವರ್ಷದ ಚೆನ್ನರಾಜ್ ಅಂತ ಗುರ್ತಿಸಲಾಗಿದ್ದು, ಗಂಭೀರ ಗಾಯಗೊಂಡ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹತ್ಯೆಗೆ ಯತ್ನ ಮಾಡಿದ ಯುವಕನನ್ನ ನಂದನ್‌ ಅಂತ ಗುರ್ತಿಸಲಾಗಿದೆ.‌ ಹಲ್ಲೆ ಮಾಡಿದ ನಂದನ್‌ ಮೇಲೆ ಸ್ಥಳೀಯರು ಕಲ್ಲು ತೂರಿದ್ದು ಆತನೂ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply