ನವೆಂಬರ್ 4 ರಿಂದ ಚಿತ್ರಮಂದಿರಗಳಲ್ಲಿ ‘ಕಂಬ್ಳಿಹುಳ’ ಪ್ರದರ್ಶನ!

masthmagaa.com:

ಸಿನಿಮಾರಂಗ ಬಹಳ ಬೇಗ ಎಲ್ಲರನ್ನು ಆಕರ್ಷಿಸುತ್ತೆ. ಕೆಲವರಿಗೆ ನಟರಾಗುವ ಆಸೆ, ಇನ್ನೂ ಕೆಲವರಿಗೆ ನಿರ್ದೇಶಕರಾಗುವ, ಕಲಾವಿದರಾಗುವ ಆಸೆ. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ಏನಾದರೂ ಸಾಧಿಸುವ ಕನಸು. ಆ ಕನಸುಗಳುಳ್ಳ ಸಿನಿಮಾ ಪ್ರೀತಿಯುಳ್ಳ ಒಂದಿಷ್ಟು ಸಮಾನ ಮನಸ್ಕರು ಸೇರಿ ಮಾಡಿರುವ ನವಿರಾದ ಪ್ರೇಮಕಥೆಯುಳ್ಳ ಚಿತ್ರ ‘ಕಂಬ್ಳಿಹುಳ’. ಟೈಟಲ್ ಮೂಲಕವೇ ಚಂದನವನ ಹಾಗೂ ಸಿನಿರಸಿಕರ ಮನಸ್ಸಲ್ಲಿ ಒಂದಿಷ್ಟು ಕುತೂಹಲ ಮೂಡಿಸಿದೆ. ಚೆಂದದ ಹಾಡಿನ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆದ ಚಿತ್ರತಂಡವೀಗ ಟ್ರೇಲರ್ ಬಿಡುಗಡೆ ಮಾಡಿದೆ. ಟ್ರೈಲರ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ನವೆಂಬರ್ 4 ನೇ ತಾರೀಖು ಬಿಡುಗಡೆ ಆಗಲಿದೆ.

ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕ ನವನ್ ಶ್ರೀನಿವಾಸ್ ಅವರ ನಿರ್ದೇಶನದ ಮೊದಲ ಸಿನಿಮಾ ಇದು. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ‘ಕಂಬ್ಳಿಹುಳ’ ಚಿತ್ರೀಕರಣ ನಡೆಸಲಾಗಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದ ಉಳಿದ ತಾರಾಗಣದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಾಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ. ನವೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

-masthmagaa.com

Contact Us for Advertisement

Leave a Reply