ಕೊರೋನಾ ಔಷಧಕ್ಕೆ 23 ಸಾವಿರ ಕೋಟಿ ಖರ್ಚಿಗೆ ಮುಂದಾದ ಅಮೆರಿಕ!

masthmagaa.com:

ಅಮೆರಿಕ ಕೊರೋನಾ ವೈರಸ್​​​​​​​​ ವಿರುದ್ಧ ಔಷಧ ಅಭಿವೃದ್ಧಿಪಡಿಸಲು ಮುಂದಾಗಿದೆ. ಅದಕ್ಕಾಗಿ 3.3 ಬಿಲಿಯನ್ ಡಾಲರ್ ಅಂದ್ರೆ 23 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಖರ್ಚು ಮಾಡಲು ನಿರ್ಧರಿಸಿದೆ. ಈ ಆ್ಯಂಟಿ ವೈರಲ್ ಡ್ರಗ್​​ ಈ ವರ್ಷಾಂತ್ಯಕ್ಕೆ ರೆಡಿಯಾಗೋ ಭರವಸೆ ಇದೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ವೈದ್ಯಕೀಯ ಸಲಹೆಗಾರ ಅಂಥೋಣಿ ಫೌಚಿ ಹೇಳಿದ್ದಾರೆ. ಆ್ಯಂಟಿವೈರಲ್ ಪ್ರೋಗ್ರಾಂ ಆಫ್ ಪ್ಯಾಂಡೆಮಿಕ್ಸ್ ಹೆಸರಿನ ಪ್ಲಾನ್​​​​​ ಇದಾಗಿದೆ. ಇತ್ತೀಚೆಗಷ್ಟೇ 1.9 ಟ್ರಿಲಿಯನ್ ಡಾಲರ್ ಮೊತ್ತದ ಅಮೆರಿಕನ್ ರೆಸ್ಕ್ಯೂ ಪ್ಯಾಕೇಜ್ ಪಾಸ್ ಮಾಡಲಾಗಿತ್ತಲ್ವಾ.. ಅದರಿಂದಲೇ ಕೊರೋನಾ ಔಷಧ ಅಭಿವೃದ್ಧಿಯ ಈ ಯೋಜನೆಗೆ ದುಡ್ಡು ನೀಡಲಾಗುತ್ತೆ. ಕೊರೋನಾ ವೈರಸ್ ಮತ್ತು ಮುಂದೆ ಬರಬಹುದಾದ ಅಂಥಹ ಬೇರೆ ವೈರಸ್​​ಗಳ ವಿರುದ್ಧ ಹೋರಾಟಕ್ಕಾಗಿ ಈ ಹೆಜ್ಜೆ ಇಡಲಾಗಿದೆ. ಅಷ್ಟೇ ಅಲ್ಲ. ಲಸಿಕೆ ಇದ್ರೂ ಕೂಡ ಲಸಿಕೆ ಕೆಲವರಿಗೆ ಕೊರೋನಾದಿಂದ ರಕ್ಷಣೆ ನೀಡದೇ ಇದ್ರೆ, ಮತ್ತು ರೂಪಾಂತರಿ ಕೊರೋನಾಗಳನ್ನು ತಡೆಯೋಕೆ ಲಸಿಕೆಗೆ ಆಗದೇ ಇದ್ರೆ ಅಂಥಹ ಸಮಯದಲ್ಲಿ ಈ ಆ್ಯಂಟಿ ವೈರಲ್ ಡ್ರಗ್​​ ಉಪಯೋಗಕ್ಕೆ ಬರುತ್ತೆ ಅಂತ ಅಂಥೋಣಿ ಫೌಚಿ ಹೇಳಿದ್ದಾರೆ. ಈ ನಡುವೆ ಕೊರೋನಾ ಸಂಬಂಧ ಬೇರೆ ದೇಶಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳ ಸಂಬಂಧ ಹೊಸ ಗೈಡ್​ಲೈನ್ಸ್ ಹೊರಡಿಸಿದೆ. ಈ ಮೂಲಕ ಇರಾನ್, ವೆವೆಜುಯೆಲಾ ಮತ್ತು ಸಿರಿಯಾದಂತ ಹಲವು ದೇಶಗಳ ಮೇಲೆ ಮಾಸ್ಕ್​, ವೆಂಟಿಲೇಟರ್ಸ್​ ಪೂರೈಕೆ ಸಂಬಂಧ ಹೇರಿದ್ದ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಇನ್ನು ಅಮೆರಿಕದ ಫೇಮಸ್ ಸರ್ಕಾರಿ ಹೆಲ್ತ್ ಇನ್ಶೂರೆನ್ಸ್​ ಒಬಾಮಾ ಕೇರ್ ತೆಗೆದು ಹಾಕಬೇಕು ಅಂತ ರಿಪಬ್ಲಿಕನ್ ಆಡಳಿತವಿರೋ ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ನಡುವೆ ಇಡೀ ವಿಶ್ವದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 40 ಲಕ್ಷ ಗಡಿ ದಾಟಿದೆ.

-masthmagaa.com

Contact Us for Advertisement

Leave a Reply