ಹೋಟೆಲ್​ನಲ್ಲಿ ತಿನ್ನುವಾಗ, ಕುಡಿಯುವಾಗಲೂ ಈ ಮಾಸ್ಕ್ ಧರಿಸಬಹುದು..!

masthmagaa.com:

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸೋದನ್ನ ಕಡ್ಡಾಯ ಮಾಡಲಾಗಿದೆ. ಆದ್ರೆ ಹೋಟೆಲ್​ಗಳಲ್ಲಿ ಏನಾದ್ರೂ ತಿನ್ನುವಾಗ ಅಥವಾ ಕುಡಿಯುವಾಗ ಮಾಸ್ಕ್ ಹಾಕೋಕ್ಕಾಗಲ್ಲ ಅಲ್ವಾ.. ಈ ಬಗ್ಗೆ ಸಾಕಷ್ಟು ಪರ, ವಿರೋಧದ ಚರ್ಚೆಗಳು ನಡೆಯುತ್ತಿವೆ. ಮಾಸ್ಕ್ ಹಾಕಿದ್ರೆ ಏನೂ ತಿನ್ನೋಕ್ಕಾಗಲ್ಲ, ಹಾಕದಿದ್ರೆ ರೂಲ್ಸ್ ಫಾಲೋ ಮಾಡ್ದಂಗೆ ಆಗುತ್ತಾ ಅನ್ನೋ ಪ್ರಶ್ನೆ ಇದೆ.

ಇದೀಗ ಕೋಲ್ಕತ್ತಾದ ಹೋಟೆಲ್​ವೊಂದರಲ್ಲಿ ಝಿಪ್ ಇರುವ ಮಾಸ್ಕ್​ ಅನ್ನು ಪರಿಚಯಿಸಲಾಗಿದೆ. ಹೋಟೆಲ್​ಗೆ ಬರುವ ಗ್ರಾಹಕರಿಗೆ ಈ ಮಾಸ್ಕ್ ನೀಡಲಾಗುತ್ತದೆ. ಗ್ರಾಹಕರೇನಾದ್ರೂ ತಿನ್ನಬೇಕು ಅಥವಾ ಕುಡಿಯಬೇಕು ಅಂದಾಗ ಮಾತ್ರ ಈ ಝಿಪ್​ ಓಪನ್ ಮಾಡಬೇಕು. ಇದರಿಂದ ಕೊರೋನಾ ಎಷ್ಟರಮಟ್ಟಿಗೆ ಕಮ್ಮಿಯಾಗುತ್ತೋ ಗೊತ್ತಿಲ್ಲ. ಆದ್ರೆ ಈ ಹೋಟೆಲ್​ ಮಾಲೀಕರು ಒಳ್ಳೆಯ ಪ್ರಯತ್ನವಂತೂ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply