ರಾಷ್ಟ್ರ ರಾಜಧಾನಿ ದೆಹಲಿಗೆ ಒಲಿಯದ ಮೇಯರ್‌ ಭಾಗ್ಯ! ಮೂರನೇ ಬಾರಿಗೆ ಚುನಾವಣೆ ವಿಫಲ!

masthmagaa.com:

ದೆಹಲಿ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯನ್ನ ಮೂರನೇ ಬಾರಿಗೆ ಮುಂದೂಡಲಾಗಿದೆ. ಸಭೆಯಲ್ಲಿ ಗದ್ದಲ ಉಂಟಾದ ಕಾರಣದಿಂದ ಇಂದೂ ಸಹ ಮೇಯರ್‌ ಚುನಾವಣೆ ನಡೆದಿಲ್ಲ. ಹಾಗಾಗಿ ಮುಂದಿನ ಸೂಚನೆವರೆಗೆ ಕಾರ್ಪೊರೇಷನ್‌ ಮೀಟಿಂಗ್‌ನ್ನ ಮುಂದೂಡಲಾಗಿದೆ. ಈ ಹಿಂದೆಯೂ ಮೇಯರ್‌ ಆಯ್ಕೆಗಾಗಿ ಎರಡು ಬಾರಿ ಸೇರಿದ್ದ ಕೌನ್ಸಿಲ್‌ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರ ಮತದಾನ ಹಕ್ಕಿನ ವಿಚಾರವಾಗಿ ಗದ್ದಲ ಉಂಟಾಗಿತ್ತು. ಇತ್ತ ಮೇಯರ್‌ ಚುನಾವಣೆ ನಡೆಯದ ಕಾರಣ ಆಪ್‌ ಪಕ್ಷ ಸುಪ್ರೀಂಕೋರ್ಟ್‌ಗೆ ಹೋಗುತ್ತೆ. ನಂತ್ರ ಚುನಾವಣೆಯನ್ನ ಸುಪ್ರೀಂಕೋರ್ಟ್‌ ಮಾನಿಟರ್‌ ಅಡಿಯಲ್ಲಿ ನಡೆಸಲಿ ಅಂತ ಆಪ್‌ ಲೀಡರ್‌ ಅತಿಶಿ ಮರ್ಲೆನಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply