ಭಾರತದ ಆರ್ಥಿಕತೆ ಸುಧಾರಿಸೋದು ಕಷ್ಟ: ನೋಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ

ದೇಶದ ಆರ್ಥಿಕತೆ ತುಂಬಾ ಕೆಟ್ಟ ಸ್ಥಿತಿ ತಲುಪಿದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಈ ಮಧ್ಯೆ 2019ರ ನೋಬೆಲ್ ಪುರಸ್ಕೃತ, ಭಾರತ  ಮೂಲದ ಅಭಿಜಿತ್ ಬ್ಯಾನರ್ಜಿ ಕೂಡ ಭಾರತದ ಆರ್ಥಿಕತೆ ಬಗ್ಗೆ ಮಾತನಾಡಿದ್ದಾರೆ. ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿದ್ದು, ಅದು ಸುಧಾರಿಸುತ್ತೆ ಅನ್ನೋ ಯಾವುದೇ ಭರವಸೆಯೂ ಇಲ್ಲ. ಪ್ರಸ್ತುತ ಅಂಕಿ ಅಂಶಗಳನ್ನು ಗಮನಿಸಿದರೆ, ಭಾರತದ ಆರ್ಥಿಕತೆ ಅಸ್ಥಿರವಾಗಿದೆ.  ಹೀಗಾಗಿ ಅದು ತಕ್ಷಣಕ್ಕೆ ಸುಧಾರಿಸುವ ಸಾಧ್ಯತೆ ತುಂಬಾ ಕಡಿಮೆ ಎಂದಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ನಾವು ಸ್ವಲ್ಪ ಮಟ್ಟಿಗಿನ ಅಭಿವೃದ್ಧಿಯನ್ನು ಕಂಡಿದ್ದೇವೆ. ಆದ್ರೆ ಈಗ ನೋಡಿದ್ರೆ ಅದೂ ಕೂಡ ಸಾಧ್ಯವಿಲ್ಲವೇನೋ ಎಂದು ಅನ್ನಿಸುತ್ತಿದೆ ಎಂದಿದ್ದಾರೆ.

ನಿನ್ನೆ ನಿರ್ಮಲಾ ಸೀತಾರಾಮನ್ ಪತಿ ಕೂಡ ಆಂಗ್ಲ ಮಾಧ್ಯಮವೊಂದಕ್ಕೆ ಲೇಖನ ಬರೆದು ಭಾರತದ ಆರ್ಥಿಕತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸರ್ಕಾರ ಎಲ್ಲವೂ ಸರಿಯಾಗಿದೆ ಎಂದರೂ ಕೂಡ ಅಂಕಿ ಅಂಶಗಳು ಅರ್ಥ ವ್ಯವಸ್ಥೆ ದುಸ್ಥಿತಿಗೆ ತಲುಪುತ್ತಿದೆ ಅನ್ನೋದನ್ನ ತೋರಿಸುತ್ತಿದೆ ಎಂದಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಪಿ.ವಿ ನರಸಿಂಹರಾವ್ ಅವರ ಆರ್ಥಿಕ ನೀತಿಯನ್ನು ಅನುಸರಿಸಬೇಕು ಎಂದಿದ್ದರು.

Contact Us for Advertisement

Leave a Reply