ಸೋಷಿಯಲ್ ಮೀಡಿಯಾವನ್ನ ಮಿಸ್​ ಯೂಸ್​​ ಮಾಡ್ಕೊಂಡ್ರೆ ಕಾದಿದೆ ಸಂಕಷ್ಟ!

masthmagaa.com:

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ಮತ್ತು ಕೇಂದ್ರ ಸರ್ಕಾರ ನಡುವೆ ಸಂಘರ್ಷ ನಡೀತಿರುವ ಮಧ್ಯೆಯೇ ಸುಳ್ಳು ಸುದ್ದಿ ಹರಡಲು, ಹಿಂಸೆಯನ್ನ ಪ್ರಚೋದಿಸಲು ಸೋಷಿಯಲ್ ಮೀಡಿಯಾವನ್ನ ಮಿಸ್​ ಯೂಸ್​ ಮಾಡ್ಕೊಂಡ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ. ಪ್ರಮುಖವಾಗಿ ಫೇಸ್​ಬುಕ್​, ವಾಟ್ಸಾಪ್​, ಟ್ವಿಟ್ಟರ್, ಲಿಂಕ್ಡ್​ಇನ್​ ಸೇರಿದಂತೆ ಕೆಲವೊಂದು ಸೋಷಿಯಲ್ ಮೀಡಿಯಾವನ್ನ ಹೆಸರಿಸಿದ ಅವರು, ನಿಮಗೆ ಭಾರತದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ನಿಮ್ಮ ಬ್ಯುಸಿನೆಸ್​ ನಡೆಸಲು, ದುಡ್ಡು ಮಾಡಲು ನೀವು ಸ್ವಾಂತಂತ್ರ್ಯರು. ಅದರ ಜೊತೆಗೆ ಭಾರತದ ಕಾನೂನು, ಸಂವಿಧಾನವನ್ನ ಕೂಡ ನೀವು ಫಾಲೋ ಮಾಡಬೇಕು. ಮಾತನಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದ್ರೆ ಆರ್ಟಿಕಲ್ 19ಎ ಪ್ರಕಾರ ಅದಕ್ಕೂ ಕೆಲವೊಂದು ನಿರ್ಬಂಧಗಳಿವೆ. ನಾವು ಸೋಷಿಯಲ್ ಮೀಡಿಯಾವನ್ನ ತುಂಬಾ ರೆಸ್ಪೆಕ್ಟ್ ಮಾಡ್ತೀವಿ. ಡಿಜಿಟಲ್ ಇಂಡಿಯಾದಲ್ಲಿ ಅವುಗಳ ಪಾತ್ರ ದೊಡ್ಡದಿದೆ ಅಂತಾನೂ ಹೇಳಿದ್ರು.

-masthmagaa.com

Contact Us for Advertisement

Leave a Reply