masthmagaa.com:
ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಕಳೆದ 3 ದಿನಗಳಿಂದ ಟ್ವಿಟರ್ ಬಳಸೋಕೆ ಸಾಧ್ಯವಾಗ್ತಿಲ್ಲ ಅಂತ ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ಖಾತೆ ಹ್ಯಾಕ್ ಆಗೋ ಬಗ್ಗೆ ಅವರಿಗೆ ಟ್ವಿಟ್ಟರ್ ಎಚ್ಚರಿಸಿತ್ತು. ಆದ್ರೆ ನಂತ್ರದಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಂತ ಕೂಡ ನಟಿ ಹೇಳಿದ್ದಾರೆ. ಇವತ್ತು ತಮಿಳುನಾಡು ಪೊಲೀಸ್ ಮುಖ್ಯಸ್ಥರನ್ನು ಭೇಟಿಯಾಗಿ ಖುಷ್ಬೂ ದೂರು ನೀಡಿದ್ದಾರೆ. ಹ್ಯಾಕರ್ಗಳು ಈಗಾಗಲೇ ಎಲ್ಲಾ ಟ್ವೀಟ್ಗಳನ್ನು ಡಿಲೀಟ್ ಮಾಡಿದ್ದು, ದುರುಪಯೋಗ ಮಾಡಿಕೊಳ್ಳದಿದ್ರೆ ಸಾಕು ಅಂತ ಖುಷ್ಬೂ ಹೇಳಿದ್ದಾರೆ. ಅಂದಹಾಗೆ ಇವರು 13 ಲಕ್ಷ ಫಾಲೋವರ್ಸ್ ಹೊಂದಿದ್ದು, ಆರಂಭದಲ್ಲಿ ಖಾತೆ ಹೆಸರನ್ನು ಬ್ರೇನ್ ಅಂತ ಚೇಂಜ್ ಮಾಡಿದ್ದ ಹ್ಯಾಕರ್ಗಳು ನಂತರ ಮತ್ತೆ ಹಸರು ರಿಸ್ಟೋರ್ ಮಾಡಿದ್ರು.
-masthmagaa.com
Contact Us for Advertisement