masthmagaa.com:

ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಏಳುತ್ತಿರೋ ಹಿನ್ನೆಲೆ ಥಿಯೇಟರ್​ನಲ್ಲಿ 50 ಪರ್ಸೆಂಟ್​ ಸೀಟ್​ ಭರ್ತಿಗೆ ಮಾತ್ರ ಅವಕಾಶ ಅನ್ನೋ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ಮಾತನಾಡಿರೋ ಸ್ಯಾಂಡಲ್​ವುಡ್​ ನಟ ಪುನೀತ್ ರಾಜ್​ಕುಮಾರ್, ‘ಥಿಯೇಟರ್​ಗಳನ್ನ ಸಂಪೂರ್ಣವಾಗಿ ಭರ್ತಿ ಮಾಡಲು ದಯವಿಟ್ಟು ಅವಕಾಶ ಕೊಡಬೇಕು. 50%​ ಸೀಟ್​​ಗಳನ್ನ ಮಾತ್ರ ಭರ್ತಿ ಮಾಡುವ ನಿರ್ಬಂಧ ಜಾರಿಗೆ ತರಬಾರದು’ ಎಂದಿದ್ದಾರೆ. ಅಲ್ಲದೆ, ಈಗಷ್ಟೇ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ. ನನ್ನ ಪ್ರಕಾರ ಹೇಳೋದಾದ್ರೆ, ನಮ್ಮ ಮತ್ತು ನಮ್ಮವರ ಜೀವ ಮುಖ್ಯ ಹೌದು. ಆದ್ರೆ ಈ ನಿರ್ಬಂಧಗಳನ್ನ ಮೊದಲೇ ಸಭೆ, ಸಮಾರಂಭಗಳು, ಚುನಾವಣೆ ಪ್ರಚಾರದ ಮೇಲೆ ಹೇರಬೇಕಿತ್ತು. ಥಿಯೇಟರ್​ಗಳಲ್ಲಿ ಎಲ್ಲವೂ ಚೆನ್ನಾಗಿದೆ. ಮಾಸ್ಕ್ ಧರಿಸೋದು, ಕೈಗಳನ್ನ ಸ್ಯಾನಿಟೈಸ್​ ಮಾಡೋದು ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ದಯವಿಟ್ಟು ಥಿಯೇಟರ್​​ಗಳಿಗೆ 100% ಸೀಟು ಭರ್ತಿಗೆ ಅವಕಾಶ ಕೊಡಬೇಕು ಅಂತ ಹೇಳಿದ್ದಾರೆ. ಏಪ್ರಿಲ್​ 1ನೇ ತಾರೀಖು ಪುನೀತ್​ ನಟನೆಯ, ಬಹುನಿರೀಕ್ಷಿತ ‘ಯುವರತ್ನ’ ಸಿನಿಮಾ ರಿಲೀಸ್ ಆಗ್ತಿದೆ.

ಇನ್ನು ನೆನಪಿರಲಿ ಪ್ರೇಮ್ ಮಾತನಾಡಿ, ‘ಯಾವಾಗಲೂ ಸಿನಿಮಾ ಇಂಡಸ್ಟ್ರಿಯನ್ನ ಮಾತ್ರ ಯಾಕೆ ಟಾರ್ಗೆಟ್ ಮಾಡಲಾಗುತ್ತೆ? ಬಸ್​, ರೈಲುಗಳಲ್ಲಿ ಪ್ರಯಾಣಿಕರು ಕೂರೋದಿಲ್ವಾ? ಪಬ್​ಗಳಲ್ಲಿ ಮೈಗೆ ಮೈ ಅಂಟಿಸಿಕೊಂಡು ಇರೋದಿಲ್ವಾ? ಮತ್ಯಾಕೆ ಥಿಯೇಟರ್​ಗಳಿಗೆ ಮಾತ್ರ ಈ ನಿಯಮ? ಎಲ್ಲರಿಗೂ ಲಸಿಕೆ ಕೊಡಿ. ಅದನ್ನ ಬಿಟ್ಟು ಇಂಥಾ ನಿರ್ಬಂಧಗಳನ್ನ ಜಾರಿಗೆ ತರಬೇಡಿ. ಒಂದು ವರ್ಷ ಸಿನಿಮಾ ಕ್ಷೇತ್ರ ಬಂದಾಗಿ ಸಾಕಷ್ಟು ನಷ್ಟವಾಗಿದೆ’ ಅಂತ ಹೇಳಿದ್ದಾರೆ

-masthmagaa.com

Contact Us for Advertisement

Leave a Reply