ಸಂಜನಾ ಗಲ್ರಾನಿಗೆ ಶಾಕ್.. ಇಂದೂ ಸಿಗಲಿಲ್ಲ ಜಾಮೀನು

masthmagaa.com:

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ನಟಿ ಸಂಜನಾ ಗಲ್ರಾನಿಗೆ ಇವತ್ತು ಕೂಡ ರಿಲೀಫ್ ಸಿಕ್ಕಿಲ್ಲ. ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಎನ್​ಡಿಪಿಎಸ್​ ವಿಶೇಷ ಕೋರ್ಟ್​ ಸೆಪ್ಟೆಂಬರ್ 19ಕ್ಕೆ ಮುಂದೂಡಿದೆ. ನಾಳೆ ಸಂಜನಾಳ ಬೇಲ್ ಭವಿಷ್ಯ ಹೊರಬೀಳಲಿದೆ. ಅಲ್ಲಿಯವರೆಗೆ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ಕಾಲ ಕಳೆಯಲಿದ್ದಾರೆ.

ಇದೇ ಪ್ರಕರಣದಲ್ಲಿ ಮೊದಲು ರಾಗಿಣಿ ದ್ವಿವೇದಿ ಅರೆಸ್ಟ್ ಆಗಿ ಪರಪ್ಪನ ‘ಪಂಜರ’ವನ್ನು ಸೇರಿದ್ದರು. ಬಳಿಕ ಸಂಜನಾ ಕೂಡ ಅರೆಸ್ಟ್ ಆಗಿದ್ದರು. ಸಂಜನಾಗೆ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಜೊತೆಗೆ ಪ್ರಕರಣವನ್ನು ಎನ್​ಡಿಪಿಎಸ್​ ವಿಶೇಷ ಕೋರ್ಟ್​ಗೆ ವರ್ಗಾಹಿಸಿತ್ತು. ಅದರಂತೆ ಇಂದು ನ್ಯಾಯಾಂಗ ಬಂಧನ ಮುಕ್ತಾಯಗೊಳ್ಳಬೇಕಿತ್ತು. ಆದ್ರೆ ಎನ್​ಡಿಪಿಎಸ್​ ಕೋರ್ಟ್​ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿಕೆ ಮಾಡಿರೋದ್ರಿಂದ ಅಲ್ಲಿವರೆಗೆ ಸಂಜನಾ ಜೈಲಿನಲ್ಲೇ ಇರಬೇಕಿದೆ.

-masthmagaa.com

Contact Us for Advertisement

Leave a Reply