ಏಷ್ಯಾದ ನಂಬರ್‌ 1 ಪಟ್ಟ ಕಳೆದುಕೊಂಡ ಗೌತಮ್‌ ಅದಾನಿ!

masthmagaa.com:

ಹಿಂಡನ್‌ಬರ್ಗ್‌ ರಿಸರ್ಚ್‌ನ ವಂಚನೆ ಆರೋಪಗಳಿಂದ ಗೌತಮ್‌ ಅದಾನಿ ಸಾಮ್ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗ್ತಿದೆ. ಅದಾನಿ ಸಮೂಹದ ಷೇರುಗಳಲ್ಲಿ ತೀವ್ರ ಕುಸಿತ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ಅದಾನಿ ಸಮೂಹದ 92 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 7.54 ಲಕ್ಷ ರೂ. ಕುಸಿತಾವಗಿದೆ. ಇದು ಅದಾನಿ ಸಮೂಹದ ಒಟ್ಟು ಮಾರುಕಟ್ಟೆ ಮೌಲ್ಯದ ಮೂರನೇ ಒಂದು ಭಾಗವಾಗಿದೆ. ಇನ್ನು ಗೌತಮ್‌ ಅದಾನಿ ಅವ್ರ ವೈಯಕ್ತಿಕ ಆಸ್ತಿ ಮೌಲ್ಯದಲ್ಲಿ 40 ಬಿಲಿಯನ್‌ ಡಾಲರ್ ಅಂದ್ರೆ ಸುಮಾರು 3.28 ಲಕ್ಷ ರೂ. ಇಳಿಕೆಯಾಗಿದೆ. ಹೀಗಾಗಿ ವಿಶ್ವ ಶ್ರೀಮಂತರ ಪಟ್ಟಿಯಿಂದ ಗೌತಮ್‌ ಅದಾನಿ ದಿನದಿಂದ ದಿನಕ್ಕೆ ಕೆಳಗಿಳಿತಿದಾರೆ. ಇದೀಗ ಫೋರ್ಬ್ಸ್‌ ಬಿಲಿಯನೇರ್ಸ್‌ ಟಾಪ್‌ ಟೆನ್‌ ಪಟ್ಟಿಯಿಂದ ಹೊರಬಿದ್ದಿರೋ ಅದಾನಿ 15ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ಏಷ್ಯಾದ ನಂಬರ್‌ 1 ಶ್ರೀಮಂತ ಸ್ಥಾನದಿಂದಾನೂ ದೂರವಾಗಿದ್ದಾರೆ. ಇದೇ ಪಟ್ಟಿಯಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ 9ನೇ ಸ್ಥಾನದಲ್ಲಿದ್ದು, ಏಷ್ಯಾದ ನಂಬರ್‌ 1 ಶ್ರೀಮಂತ ಎನಿಸಿಕೊಂಡಿದ್ದಾರೆ.) ಇದರ ನಡುವೆಯೇ ಇಸ್ರೇಲ್‌ನ ಹೈಫಾ ಬಂದರನ್ನ ಅದಾನಿ ಗ್ರೂಪ್‌ ಸ್ವಾಧೀನಪಡಿಸಿಕೊಂಡಿದೆ. ಅದಾನಿ ಸಮೂಹದ ಆಸ್ತಿ ಕರಗಿ ಹೋಗ್ತಿರೋದು ಭಾರಿ ಸದ್ದು ಮಾಡ್ತಿರೋ ಹೊತ್ತಲ್ಲೇ, 1.2 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 9.8 ಸಾವಿರ ಕೋಟಿ ರೂಪಾಯಿಗೆ ಹೈಫಾ ಬಂದರನ್ನ ಖರೀದಿ ಮಾಡಿದೆ. ಇದು ಅತ್ಯಂತ ದೊಡ್ಡ ಮೈಲಿಗಲ್ಲು ಅಂತ ನಾನು ಭಾವಿಸುತ್ತೇನೆ..100 ವರ್ಷಗಳ ಹಿಂದೆ ಹಾಗೂ ಮೊದಲ ವಿಶ್ವಯುದ್ಧ ಸಮಯದಲ್ಲಿ ಹೈಫಾ ನಗರವನ್ನ ವಿಮೋಚನೆಗೊಳಿಸೋಕೆ ಧೈರ್ಯಶಾಲಿ ಭಾರತೀಯ ಸೈನಿಕರು ಸಹಾಯ ಮಾಡಿದ್ರು. ಇದೀಗ ಅತ್ಯಂತ ದೃಢವಾದ ಭಾರತೀಯ ಹೂಡಿಕೆದಾರರು ಹೈಫಾ ಬಂದರಿನ ವಿಮೋಚನೆಗೆ ಸಹಾಯ ಮಾಡ್ತಿದಾರೆ ಅಂತ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ. ಇನ್ನು ಹೈಫಾ ಬಂದರನ್ನ ಅದಾನಿ ಗ್ರೂಪ್‌ಗೆ ಹಸ್ತಾಂತರ ಮಾಡ್ತಿರೋ ಈ ಮಹತ್ವದ ದಿನದಂದು ನೆತನ್ಯಾಹು ಅವ್ರನ್ನ ಭೇಟಿಯಾಗಿದ್ದು ವಿಶೇಷವಾಗಿದೆ. ಅಬ್ರಹಾಂ ಒಪ್ಪಂದ ಮೆಡಿಟರೇನಿಯನ್‌ ಸಮುದ್ರದ ಲಾಜಿಸ್ಟಿಕ್ಸ್‌ಗೆ ಗೇಮ್‌ ಚೇಂಜರ್‌ ಆಗಲಿದೆ.‌ ಜೊತೆಗೆ ಹೈಫಾ ಪೋರ್ಟ್‌ ಅನ್ನ ಎಲ್ಲರೂ ಮೆಚ್ಚಿಕೊಳ್ಳುವಂತೆ ಪರಿವರ್ತಿಸೋಕೆ ಅದಾನಿ ಗಡೋಟ್ ನಿರ್ಧರಿಸಿದೆ ಅಂತ ಗೌತಮ್‌ ಅದಾನಿ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply