masthmagaa.com:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಈ ತಿಂಗಳಾಂತ್ಯದೊಳಗೆ ಅದಾನಿ ಗ್ರೂಪ್‌ ಉದ್ಯಮ ಸಮೂಹಕ್ಕೆ ಸೇರ್ಪಡೆಯಾಗಲಿದೆ. ಅಕ್ಟೋಬರ್‌ 31ರೊಳಗೆ ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ವಿಮಾನಯಾನ ಸಚಿವಾಲಯ, ಅದಾನಿ ಗ್ರೂಪ್​, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ನವೆಂಬರ್‌ 2ಕ್ಕೆ ಲಖನೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವೆಂಬರ್‌ 11ಕ್ಕೆ ಅಹಮದಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅದಾನಿಯ ತೆಕ್ಕೆಗೆ ಬೀಳಲಿದೆ.

ಕಳೆದ ವರ್ಷದ ಫೆಬ್ರವರಿಯಲ್ಲೇ ಲಖನೌ, ಅಹಮದಾಬಾದ್‌, ಜೈಪುರ, ಮಂಗಳೂರು, ತಿರುವಂತನಪುರಂ ಹಾಗೂ ಗುವಾಹಟಿ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನ ಕೇಂದ್ರ ಸರ್ಕಾರ ಕೈಗೊಂಡಿತ್ತು. ಬಿಡ್‌ನಲ್ಲಿ ಭಾಗವಹಿಸಿದ್ದ ಅದಾನಿ ಗ್ರೂಪ್‌ ಎಲ್ಲಾ ವಿಮಾನ ನಿಲ್ದಾಣಗಳ ಬಿಡ್​ ಗೆದ್ದಿತ್ತು. ಆದ್ರೆ ಕೊರೋನಾ ಕಾರಣದಿಂದಾಗಿ ಏರ್​ಪೋರ್ಟ್​ ಹಸ್ತಾಂತರ ಸ್ವಲ್ಪ ತಡವಾಗಿದೆ. ಇನ್ನು ಕೆಲ ತಿಂಗಳ ಕಾಲ ವಿಮಾನ ನಿಲ್ದಾಣದ ನಿರ್ದೇಶಕರು ಮುಂದುವರಿಯಲಿದ್ದು, ಬಳಿಕ ಅದಾನಿ ಕಂಪನಿಯು ತನ್ನ ಅಧಿಕಾರಿಯನ್ನ ನಿಯೋಜಿಸುವ ಸಾಧ್ಯತೆ ಇದೆ.

ಇದರ ಮಧ್ಯೆ ವಾರಣಾಸಿ, ಅಮೃತಸರ, ಭುವನೇಶ್ವರ, ರಾಯ್‌ಪುರ, ಇಂದೋರ್ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳು ಕೂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಖಾಸಗೀಕರಣಗೊಳಿಸಲು ಸಜ್ಜಾಗಿವೆ.

-masthmagaa.com

Contact Us for Advertisement

Leave a Reply