ಮಹಿಳಾ IPL: 5 ತಂಡಗಳ ಹರಾಜಿನ ಮೂಲಕ 4669.99 ಕೋಟಿ ರೂ. ಗಳಿಸಿದ BCCI

masthmagaa.com:

ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಗಾಗಿ ಅಂದ್ರೆ ಮೊದಲ ಆವೃತ್ತಿಗಾಗಿ 5 ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದೆ. 5 ತಂಡಗಳ ಹರಾಜಿನ ಮೂಲಕ ಬಿಸಿಸಿಐ ಒಟ್ಟು 4669.99 ಕೋಟಿ ರೂ. ಆದಾಯಗಳಿಸಿದೆ ಎನ್ನಲಾಗಿದೆ. ಅದ್ರಲ್ಲೂ ಈ 5 ತಂಡಗಳಲ್ಲಿ 3 ತಂಡಗಳನ್ನ ಪುರುಷರ ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ಅದಾನಿ ಸ್ಪೋರ್ಟ್ಸ್​​ಲೈನ್ ಪ್ರೈವೇಟ್ ಲಿಮಿಟೆಡ್ 1289 ಕೋಟಿ ರೂ. ನೀಡಿ ಅಹಮದಾಬಾದ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ಉಳಿದಂತೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು 901 ಕೋಟಿ ರೂ.ಗೆ ಬೆಂಗಳೂರು ಫ್ರಾಂಚೈಸಿಯನ್ನ, 912. 99 ಕೋಟಿ ರೂಗೆ ಇಂಡಿಯಾವಿನ್ ಸ್ಪೋರ್ಟ್ಸ್ ಮುಂಬೈ ಫ್ರಾಂಚೈಸಿಯನ್ನ, ಡೆಲ್ಲಿಯನ್ನ JSW GMR ಗ್ರೂಪ್ ಹಾಗೂ ಲಕ್ನೋವನ್ನ ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ಸ್ ಖರೀದಿಸಿದೆ.

-masthmagaa.com

Contact Us for Advertisement

Leave a Reply