ಅದಾನಿ ಪೋರ್ಟ್ಸ್‌ ಭಾರೀ ಧಾಖಲೆ: ಈ ವರ್ಷ 382MMT ಸರಕು ನಿರ್ವಹಣೆ

masthmagaa.com:

ದೇಶದ ಅತಿದೊಡ್ಡ ಬಂದರುಗಳ ಕಾರ್ಯನಿರ್ವಾಹಕ ಕಂಪನಿ ಅದಾನಿ ಪೋರ್ಟ್ಸ್‌, ಫೆಬ್ರವರಿಯಲ್ಲಿ ಬರೋಬ್ಬರಿ 35.4 ಮಿಲಿಯನ್‌ ಮೆಟ್ರಿಕ್‌ ಟನ್‌ ಸರಕನ್ನ ಮ್ಯಾನೇಜ್‌ ಮಾಡಿದೆ. ಇದು ಕಂಪನಿ ಮ್ಯಾನೇಜ್‌ ಮಾಡಿರೋ ಸರಕಿನಲ್ಲಿ ಇಯರ್‌ ಆನ್‌ ಇಯರ್‌ 33% ಜಾಸ್ತಿ ಅಂತ ತನ್ನ ಎಕ್ಸ್‌ಚೇಂಜ್‌ ಫೈಲಿಂಗ್‌ನಲ್ಲಿ ಹೇಳಿಕೊಂಡಿದೆ. ಒಟ್ಟಾರೆ ಈ ಆರ್ಥಿಕ ವರ್ಷದಲ್ಲಿ ಅದಾನಿ ಪೋರ್ಟ್‌ ಬರೋಬ್ಬರಿ 382MMT ಕಾರ್ಗೊವನ್ನ ನಿಭಾಯಿಸಿದೆ. ಸದ್ಯ ಈ ಕಂಪನಿಯ ನಿವ್ಹಳ ಲಾಭ ಕಳೆದ ವರ್ಷಕ್ಕಿಂತ ಬರೋಬ್ಬರಿ 70% ಜಾಸ್ತಿಯಾಗಿ ₹2,208.4 ಕೋಟಿಗೆ ತಲುಪಿದೆ. ಇನ್ನೊಂದು ಕಡೆ ಹಿಂಡನ್‌ಬರ್ಗ್‌ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಅದಾನಿ ಗ್ರೂಪ್ಸ್‌ $409 ಮಿಲಿಯನ್‌ ಮೌಲ್ಯದ ಬಾಂಡ್‌ಗಳನ್ನ ಮಾರಾಟ ಮಾಡಿದೆ.

-masthmagaa.com

Contact Us for Advertisement

Leave a Reply