ಸಂಸತ್ತಿನಲ್ಲಿ ಮತ್ತೆ ಅದಾನಿ ವಿವಾದ: ಗಾಂಧಿ ಪ್ರತಿಮೆ ಮುಂದೆ ವಿಪಕ್ಷಗಳಿಂದ ಪ್ರತಿಭಟನೆ

masthmagaa.com:

ಬಜೆಟ್‌ ಅಧಿವೇಶನದಲ್ಲಿ ಅದಾನಿ ಸಮೂಹದ ಬಗ್ಗೆ ಚರ್ಚೆ ಮಾಡಬೇಕು ಅಂತ ಇಂದು ವಿಪಕ್ಷಗಳು ಪಟ್ಟು ಹಿಡಿದ ಕಾರಣ ಸದನಗಳ ಕಲಾಪವನ್ನ ಮಧ್ಯಾಹ್ನ ಗಂಟೆವರೆಗೆ ಮುಂದೂಡಲಾಗಿದೆ. ಅದಾನಿ ಸಮೂಹದ ವಿವಾದವನ್ನ ಜಂಟಿ ಸಂಸದೀಯ ಸಮಿತಿ ಅಥ್ವಾ ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಅಂತ ಒತ್ತಾಯಿಸಿ, ವಿರೋಧ ಪಕ್ಷಗಳು ಸಂಸತ್ತಿನ ಆವರಣದಲ್ಲಿರೊ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಸಂಸತ್ತಿನಲ್ಲಿ ಅದಾನಿ ಕುರಿತ ಚರ್ಚೆಯನ್ನ ತಪ್ಪಿಸೋಕೆ ಮೋದಿ ಜೀ ತಮ್ಮ ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಅದಕ್ಕೆ ಒಂದು ಕಾರಣವಿದೆ ಅದು ನಿಮಗೆ ಗೊತ್ತು. ಅದಾನಿ ಅವರ ಹಿಂದೆ ಇರೊ ಶಕ್ತಿ ಬಗ್ಗೆ ದೇಶಕ್ಕೆ ಗೊತ್ತಾಗಬೇಕು. ಈ ಬಗ್ಗೆ ಚರ್ಚೆಯಾಗಬೇಕು ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಹಿಂಡನ್‌ಬರ್ಗ್‌ ರಿಪೋರ್ಟ್‌ ಬಂದಿದ್ದೇ ತಡ, ಅದಾನಿ ಸಾಮ್ರಾಜ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಂದು ಅದಾನಿ ಷೇರುಗಳಲ್ಲಿ 10% ಕುಸಿತವಾಗಿದೆ. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸಿಮಿಶನ್‌, ಅದಾನಿ ಗ್ರೀನ್‌ ಎನರ್ಜಿ ಸೇರಿದಂತೆ ಒಟ್ಟು ಹತ್ತು ಸಂಸ್ಥೆಗಳ ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ಲ್ಲಿ ಇಂದು 50 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ಇದರೊಂದಿಗೆ ಕಳೆದ 8 ದಿನಗಳಲ್ಲಿ 10 ಲಕ್ಷ ಕೋಟಿ ನಷ್ಟವನ್ನ ಅದಾನಿ ಗ್ರೂಪ್‌ ಅನುಭವಿಸಿದೆ. ಇನ್ನೊಂದ್‌ ಕಡೆ, ಸಾಲ ಪಡೆಯಲು ಅಡವಿಟ್ಟಿರೊ ಷೇರುಗಳನ್ನ ಬಿಡಿಸಿಕೊಳ್ಳಲು ಅವಧಿಗೂ ಮುನ್ನವೇ 1.11 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 9,100 ಕೋಟಿ ರೂ. ಪಾವತಿ ಮಾಡೋದಾಗಿ ಅದಾನಿ ಸಮೂಹ ಹೇಳಿದೆ. ಈ ಷೇರುಗಳು ಸೆಪ್ಟಂಬರ್‌ 2024ರಲ್ಲಿ ಮೆಚುರಿಟಿ ಹೊಂದಲಿದ್ದು, ಅದಕ್ಕೂ ಮುನ್ನ ಪೇ ಮಾಡಲಾಗುವುದು ಅಂತ ಕಂಪನಿ ತಿಳಿಸಿದೆ.

-masthmagaa.com

Contact Us for Advertisement

Leave a Reply