ನಾವು ರೋಹಿಂಗ್ಯಾ ನಿರಾಶ್ರಿತರಿಗೆ ಮನೆ ಕೊಡಲ್ಲ.. ಕೇಂದ್ರ ಗೃಹ ಸಚಿವಾಲಯ

masthmagaa.com:

ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮಯನ್ಮಾರ್‌ನಿಂದ ಬಂದ ರೊಹಿಂಗ್ಯಾ ನಿರಾಶ್ರಿತರನ್ನ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಶಿಫ್ಟ್ ಮಾಡಲು ನಿರ್ಧರಿಸಿದ್ದು, ಅವರಿಗೆ ಪಶ್ಚಿಮ ದೆಹಲಿಯ ಬಕ್ಕರ್​​ವಾಲಾದಲ್ಲಿ ಫ್ಲಾಟ್ ನೀಡಲಾಗುವುದು ಮತ್ತು ಭದ್ರತೆಯನ್ನ ಕೊಡೋದಾಗಿ ಘೋಷಿಸಿ ಟ್ವೀಟ್‌ ಮಾಡಿದ್ರು. ಆದ್ರೆ ಅದಾದ ಕೆಲವು ಗಂಟೆಗಳ ನಂತ್ರ ಗೃಹಸಚಿವಾಲಯ ಅಂತಹ ಯಾವುದೇ ಸೌಲಭ್ಯಗಳನ್ನ ಕೊಡೋದಿಲ್ಲ. ಸರ್ಕಾರ ಈ ಹೇಳಿಕೆಯನ್ನ ವಿರೋಧಿಸುತ್ತೆ. ರೋಹಿಂಗ್ಯಾ ಅಕ್ರಮ ವಿದೇಶಿಯರು. ಅಕ್ರಮ ವಿದೇಶಿಯರನ್ನು ಕಾನೂನು ಮೂಲಕ ದೇಶದಿಂದ ಗಡಿಪಾರು ಮಾಡುವ ವರಗೆ ಅವರನ್ನು ಬಂಧನದಲ್ಲೇ ಇರಿಸಲಾಗುವುದು ಎಂದಿದೆ ಅಂತ ಹೇಳಿ ಉಲ್ಟಾ ಹೊಡೆದಿದೆ.

-masthmagaa.com

Contact Us for Advertisement

Leave a Reply