ಅಮೆರಿಕ ಜೊತೆ ಮಾತು, ಸಂಘರ್ಷ ಎರಡಕ್ಕೂ ರೆಡಿ ಇರಿ: ಕಿಮ್ ಜಾಂಗ್ ಉನ್ ಕರೆ

masthmagaa.com:

ಅಮೆರಿಕದ ಜೊತೆಗೆ ಮಾತುಕತೆ ಮತ್ತು ಸಂಘರ್ಷ ಎರಡಕ್ಕೂ ರೆಡಿ ಇರಿ ಅಂತ ಉತ್ತರ ಕೊರಿಯಾ ಸವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶಿಸಿದ್ಧಾರೆ. ಆಡಳಿತಾರೂಢ ವರ್ಕರ್ಸ್​ ಪಾರ್ಟಿಯ ಸೆಂಟ್ರಲ್ ಕಮಿಟಿಯ ಸಮಗ್ರ ಸಭೆಯಲ್ಲಿ ಮಾತನಾಡಿದ ಅವರು, ಬೈಡೆನ್ ಸರ್ಕಾರದ ಜೊತೆಗೆ ತಮ್ಮ ಸಂಬಂಧಕ್ಕಾಗಿ ಕಾರ್ಯತಂತ್ರದ ಕುರಿತು ವಿಸ್ತಾರವಾಗಿ ಚರ್ಚಿಸಿದ್ದಾರೆ. ಇದ್ರಲ್ಲಿ ಅಮೆರಿಕಾ ಜೊತೆ ಮಾತುಕತೆ ಜೊತೆಗೆ ಸಂಘರ್ಷಕ್ಕೂ ರೆಡಿ ಇರಬೇಕು. ನಮ್ಮ ದೇಶದ ಘನತೆಯನ್ನು ಕಾಪಾಡಲು ಸಕಲ ರೀತಿಯಲ್ಲಿ ಸಿದ್ಧವಾಗಿರಬೇಕು ಎಂದಿದ್ದಾರೆ. ಅಂದಹಾಗೆ ಉತ್ತರ ಕೊರಿಯಾ ಈಗಾಗಲೇ ಬೈಡೆನ್ ಸರ್ಕಾರ ತನಗೆ ಪ್ರತಿಕೂಲವಾದ ನೀತಿಗಳನ್ನು ಅನುಸರಿಸ್ತಾ ಇದೆ. ಓರ್ವ ಹಿರಿಯ ಪ್ರಜಾಪ್ರಭುತ್ವವಾದಿ ನಾಯಕರಾದ ಜೋ ಬೈಡೆನ್​​, ಉತ್ತರ ಕೊರಿಯಾದ ಪರಮಾಣು ಸವಾಲುಗಳನ್ನು ನಾವು ರಾಜತಾಂತ್ರಿಕವಾಗಿಯೂ ಎದುರಿಸ್ತೀವಿ. ಸರಿಯಾದ ಉತ್ತರದ ಮೂಲಕವೂ ಎದುರಿಸ್ತೀವಿ ಅಂತ ಹೇಳೋ ಮೂಲಕ ದೊಡ್ಡ ತಪ್ಪು ಮಾಡಿದೆ ಅಂತ ಆರೋಪಿಸಿದೆ. 2019ರಲ್ಲಂತೂ ನಾರ್ಥ್ ಕೊರಿಯಾ, ಜೋ ಬೈಡೆನ್​​ರನ್ನು ದೊಣ್ಣೆಯಿಂದ ಹೊಡೆದು ಕೊಲ್ಲಬೇಕು ಅಂತ ಹೇಳಿತ್ತು. ನಂತರದಲ್ಲಿ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಭೇಟಿಯಾಗಿ, ಮಾತುಕತೆ ನಡೆಸಿದ್ರು. ಆದ್ರೂ ಕೂಡ ಬೈಡೆನ್ ಆಡಳಿತದ ಹೊಸ ಗಾಳಿ ಉಭಯದೇಶಗಳ ನಡುವಿನ ಸಂಬಂಧ ಕೆಂಡದ ಮೇಲಿದ್ದ ಬೂದಿ ಹೋಗಿ, ಕೆಂಪಾಗುವಂತೆ ಮಾಡಿದೆ.

-masthmagaa.com

Contact Us for Advertisement

Leave a Reply