ನ್ಯಾಟೋ+ ಗುಂಪಿಗೆ ಭಾರತವನ್ನ ಸೇರಿಸಲು ಶಿಫಾರಸು ಮಾಡಿದ ಅಮೆರಿಕ!

masthmagaa.com:

ನ್ಯಾಟೋ ಮಿತ್ರರಾಷ್ಟ್ರಗಳ ಪಟ್ಟಿ ಅಥ್ವಾ ನ್ಯಾಟೋ+ ಪಟ್ಟಿಗೆ ಭಾರತವನ್ನ ಸೇರಿಸಬೇಕು ಅಂತ ಅಮೆರಿಕದ ಸಂಸತ್‌ ಸಮಿತಿ ಶಿಫಾರಸು ಮಾಡಿದೆ. ಚೀನಾದೊಂದಿಗೆ ಸ್ಪರ್ಧೆಗಿಳಿದಿರುವ ಅಮೆರಿಕ, ಭಾರತವನ್ನ ಮಿತ್ರರಾಷ್ಟ್ರಗಳ ಗುಂಪಿಗೆ ಸೇರಿಸುವ ಮೂಲಕ ತಮ್ಮ ನ್ಯಾಟೋ+ ಗುಂಪನ್ನ ಇನ್ನಷ್ಟು ಬಲಪಡಿಸಿಕೊಳ್ಳಲು ಯೋಜಿಸಿದೆ ಎನ್ನಲಾಗಿದೆ. ಇದಕ್ಕಾಗಿ ಭಾರತವನ್ನ ನ್ಯಾಟೊ ಪ್ಲಸ್‌ಗೆ ಸೇರಿಸಬೇಕು ಅಂತ Strategic Competition between the United States and the Chinese Communist Party (CCP) ಅನ್ನೋ ಅಮೆರಿಕದ ಹೌಸ್‌ ಸೆಲೆಕ್ಟ್‌ ಕಮಿಟಿ ಶಿಫಾರಸು ಮಾಡಿದೆ. ಈ ಮೂಲಕ ಚೀನಾ ಮೇಲೆ ಕಣ್ಣಿಡಲು ಸಹಕಾರಿಯಾಗಲಿದೆ ಅನ್ನೋದು ಅಮೆರಿಕ ಪ್ಲಾನ್‌ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಅಂದ್ಹಾಗೆ ನ್ಯಾಟೋ ಅಥವಾ ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌ ಅನ್ನೋದು 31 ದೇಶಗಳ ರಕ್ಷಣಾ ಒಕ್ಕೂಟ. ಇದ್ರಲ್ಲಿ 29 ಯುರೋಪಿಯನ್‌ ಮತ್ತು2 ಅಮೆರಿಕನ್‌ ದೇಶಗಳಿವೆ. ಆದ್ರೆ ನ್ಯಾಟೋ ಪ್ಲಸ್‌ ಅನ್ನೋದು ನ್ಯಾಟೋ ಜೊತೆಗೆ ಒಂದು ಸೆಕ್ಯುರಿಟಿ ಮ್ಯಾನೇಜ್‌ಮೆಂಟ್‌, ರಕ್ಷಣಾ ಹೊಂದಾಣಿಕೆ… ಒಕ್ಕೂಟ ಅಲ್ಲ… ಪ್ರಸ್ತುತ ಇದ್ರಲ್ಲೀಗ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಜಪಾನ್‌, ಇಸ್ರೇಲ್‌ ಮತ್ತು ದಕ್ಷಿಣ ಕೊರಿಯಾ ಇವೆ. ಹೀಗಾಗಿ ಇದನ್ನ ನ್ಯಾಟೋ ಪ್ಲಸ್‌ 5 ಅಂತ ಕೂಡ ಕರೀತಾರೆ. ಈ ರಾಷ್ಟ್ರಗಳು ರಕ್ಷಣೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಒಂದ್ವೇಳೆ ತೈವಾನ್‌ ಮೇಲೆ ಚೀನಾ ಏನಾದ್ರು ಅಟ್ಯಾಕ್‌ ಮಾಡಿದ್ರೆ ಆಗ ಸುಮ್ನೆ ಎಕನಾಮಿಕ್‌ ಸ್ಯಾಂಕ್ಷನ್ಸ್‌ ಹೇರಿದ್ರೆ ಪ್ರಯೋಜನ ಬರಲ್ಲ. ಬಟ್‌ ಅದಕ್ಕೆ ಈ G7 ರಾಷ್ಟ್ರಗಳು, ನ್ಯಾಟೋ, ನ್ಯಾಟೋ ಪ್ಲಸ್‌ 5 ಮತ್ತು ಕ್ವಾಡ್‌ ಸದಸ್ಯರು ಒಟ್ಟಿಗೆ ಸೇರಿ ಜಾಯಿಂಟ್‌ ಪ್ರತಿಕ್ರಿಯೆ ನೀಡಿದ್ರೆ ಪರಿಣಾಮಕಾರಿ ಆಗುತ್ತೆ ಅನ್ನೋದು ಹೌಸ್‌ ಸೆಲೆಕ್ಟ್‌ ಕಮಿಟಿಯ ಪ್ಲಾನ್‌. ಇನ್ನು ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಜೂನ್‌ನಲ್ಲಿ ಭೇಟಿ ನೀಡಲಿರುವ ಹೊತ್ತಿನಲ್ಲೇ ಭಾರತಕ್ಕೆ ನ್ಯಾಟೋ ಮಿತ್ರರಾಷ್ಟ್ರದ ಸ್ಥಾನ ನೀಡೋಕೆ ಸಮಿತಿ ಶಿಫಾರಸು ಮಾಡಿರೋದು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply