ಅವರು ಲಿಂಬೆ ಹಣ್ಣು ಇಟ್ಟು ಪೂಜೆ ಮಾಡ್ತಾರೆ, ನಾವು ಶರಬತ್ತು ಮಾಡ್ತೀವಿ: ಓವೈಸಿ

ಮಹಾರಾಷ್ಟ್ರ: ಫ್ರಾನ್ಸ್​ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ ಪೂಜೆ ಮಾಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್​ಗೆ ಎಐಎಂಐಎಂ(ಆಲ್ ಇಂಡಿಯಾ ಮಜ್ಲೀಸ್ ಎ ಇತ್ತಹಾದಲ್ ಮುಸ್ಲಿಮೀನ್) ಸಂಘಟನೆ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಟಾಂಗ್ ಕೊಟ್ಟಿದ್ದಾರೆ. ಅವರು ನಿಂಬೆ ಹಣ್ಣಿನಿಂದ ಪೂಜೆ ಮಾಡುತ್ತಾರೆ. ಆದ್ರೆ ನಾವು ನಿಂಬೆ ಹಣ್ಣಿಂದ ಶರಬತ್ತು ಮಾಡಿ ಜನರ ದಾಹ ನೀಗಿಸಲು ನೀಡುತ್ತೇವೆ ಎಂದಿದ್ದಾರೆ.

ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈನ ಮುಂಬಾ ದೇವಿ ಬಳಿ ತಮ್ಮ ಪಕ್ಷದ ಕ್ಯಾಂಡಿಡೇಟ್ ಪರ ಪ್ರಚಾರ ಮಾಡಿದ್ರು. ಈ ವೇಳೆ ಶಿವಸೇನೆ ಮತ್ತು ಉದ್ಧವ್ ಠಾಕ್ರೆ ವಿರುದ್ಧ ಕೆಂಡಕಾರಿದ್ದಲ್ಲದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರುದ್ಧವೂ ವಾಗ್ದಾಳಿ ನಡೆಸಿದ್ರು.

ಅಕ್ಟೋಬರ್ 8ರಂದು ಫ್ರಾನ್ಸ್​​ನಲ್ಲಿ ರಫೇಲ್ ವಿಮಾನವನ್ನು ಸಾಂಕೇತಿಕವಾಗಿ ಸ್ವೀಕರಿಸಿದ್ದ ರಾಜನಾಥ್ ಸಿಂಗ್​​, ಲಿಂಬೆ ಹಣ್ಣು ಇಟ್ಟು, ಓಂ ಬಿಡಿಸಿ ಪೂಜೆ ಮಾಡಿದ್ದರು.

Contact Us for Advertisement

Leave a Reply