ಮೋದಿ ಮತ್ತು ಮಮತಾ ಅಣ್ಣ-ತಂಗಿ ಇದ್ದಂತೆ ಅಂತೆ!

masthmagaa.com:

ಇಷ್ಟು ದಿನ ಮೋದಿ ವರ್ಸಸ್ ಮಮತಾ ಭೀಕರ ಯುದ್ಧ ನೋಡಿದ್ದ ಪಶ್ಚಿಮ ಬಂಗಾಳದಲ್ಲಿ ಒವೈಸಿ ಹೊಸ ಆಟ ಹೂಡಿದ್ದಾರೆ. ಇಷ್ಟು ದಿನ ಬಿಜೆಪಿ ಟಿಎಮ್​ಸಿ ಪ್ರಚಾರದ ಅಬ್ಬರ ನೋಡಿದ್ದ ಮತದಾರರ ಮುಂದೆ ಒವೈಸಿ ಫುಲ್ ಟ್ವಿಸ್ಟ್​​ಗಳಿರೋ ಭಾಷಣ ಮಾಡಿದ್ದಾರೆ. ನೋಡಿ ಈ ಮೋದಿ – ಮಮತಾ ಅಣ್ಣ ತಂಗಿ ಇದ್ದ ಹಾಗೆ. ಒಂದೇ ನಾಣ್ಯದ ಎರಡು ಮುಖಗಳು ಇವ್ರು. ಜನ್ರನ್ನ ಬಕರಾ ಮಾಡೋಕೆ ಸುಮ್ಮನೆ ಜಗಳ ಆಡಿದ ಹಾಗೆ ಆಡ್ತಾರೆ ಅಷ್ಟೆ ಅಂದಿದ್ದಾರೆ. ನಾನು ಚಾಲೆಂಜ್ ಮಾಡ್ತೀನಿ. ಕಳೆದ 10 ವರ್ಷಗಳಲ್ಲಿ ಮಮತಾ ಬಂಗಾಳ ಮುಸ್ಲಿಮರಿಗೆ ಏನು ಉಪಕಾರ ಮಾಡಿದ್ದಾರೆ ಹೇಳಲಿ ಅಂದಿದ್ದಾರೆ ಎಐಮಿಐಎಮ್​ ಪಕ್ಷದ ನಾಯಕ ಅಸಾದುದ್ದೀನ್​ ಒವೈಸಿ.
ಈ ನಡುವೆ ಜಾರಿನಿರ್ದೇಶನಾಲಯ/ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್ ಒಬ್ಬ ಸಚಿವ ಮತ್ತು ಒಬ್ಬ ಹಿರಿಯ ಟಿಎಂಸಿ ನಾಯಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಐ-ಕೋರ್​​ ಹೆಸರಿನ ಮೋಸದ ಸ್ಕೀಮಿನ ಆರೋಪ ಸಂಬಂಧ ಈ ನೊಟಿಸ್​ ನೀಡಲಾಗಿದೆ.

-masthmagaa.com

 

Contact Us for Advertisement

Leave a Reply