ನಮ್ಮ ಹೆಲಿಕಾಪ್ಟರ್ ನಾವೇ ಹೊಡೆದ್ವಿ: ವಾಯುಸೇನಾ ಮುಖ್ಯಸ್ಥ

ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಎಫ್-16 ವಿಮಾನ ಹೊಡೆದುರುಳಿಸಿದ್ದು ನಿಮಗೆ ಗೊತ್ತಿದೆ. ಆದ್ರೆ ಅವತ್ತೇ ಭಾರತದ ಒಂದು ಹೆಲಿಕಾಪ್ಟರ್ ಮಿಗ್ 17 ವಿ5 ಕೂಡ ಪತನವಾಗಿತ್ತು. ಶ್ರೀನಗರದ ಬಡ್ಗಾಂವ್ ಬಳಿ ನಡೆದಿದ್ದ ಈ ಘಟನೆಯಲ್ಲಿ 6 ಮಂದಿ ವಾಯುಸೇನೆ ಅಧಿಕಾರಿಗಳು ಮತ್ತು ನಾಗರಿಕರೊಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಇಂದು ಮಾತನಾಡಿದ ನೂತನ ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ, ಇದು ನಮ್ಮಿಂದ ನಡೆದ ದೊಡ್ಡ ತಪ್ಪು, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ಬಗ್ಗೆ ಕಳೆದ ವಾರವಷ್ಟೇ ಕೋರ್ಟ್ ಎಂಕ್ವೈರಿ ಮುಗಿದಿದೆ. ನಮ್ಮ ಮಿಸೈಲ್ ನಮ್ಮದೇ ಹೆಲಿಕಾಪ್ಟರ್‍ಗೆ ಹೊಡೆದಿರೋದು ಗೊತ್ತಾಗಿದೆ. ಇಂತಹ ಘಟನೆಗಳು ಮತ್ತೆ ನಡೆಯುವುದಿಲ್ಲ. ಅಲ್ಲದೆ ಇಬ್ಬರು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಅಂತ ಹೇಳಿದ್ದಾರೆ.

Contact Us for Advertisement

Leave a Reply