ಭಾರತಕ್ಕೆ ರಫೇಲ್ ಬಲ.. ಇವತ್ತು ಹಸ್ತಾಂತರ..

ಕೇಂದ್ರ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್ ತಲುಪಿದ್ದಾರೆ. ವಿಶೇಷ ಅಂದ್ರೆ ಇವತ್ತು 36 ರಫೇಲ್ ವಿಮಾನಗಳ ಪೈಕಿ ಮೊದಲ ವಿಮಾನವನ್ನು ಇವತ್ತು ರಾಜನಾಥ್ ಸಿಂಗ್ ಸ್ವೀಕರಿಸಲಿದ್ದಾರೆ. ಮೂರು ದಿನಗಳ ತಮ್ಮ ಈ ಪ್ರವಾಸದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಸೇರಿದಂತೆ ಹಲವು ಪ್ರಮುಖ ನಾಯಕರೊಂದಿಗೆ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ. ವಾಯುಸೇನೆ ವಾರ್ಷಿಕೋತ್ಸವ ಮತ್ತು ದಸರಾ ಹಬ್ಬದ ಟೈಮಲ್ಲೇ ರಫೇಲ್ ಭಾರತಕ್ಕೆ ಬರುತ್ತಿರೋದು ಮತ್ತೊಂದು ವಿಶೇಷ. ಇನ್ನು ರಫೇಲ್ ಸ್ವೀಕರಿಸುವ ವೇಳೆ ಅಲ್ಲೇ ರಾಜನಾಥ್ ಸಿಂಗ್ ಆಯುಧ ಪೂಜೆ ಕೂಡ ನೆರವೇರಿಸಲಿದ್ದಾರೆ. ಇನ್ನು ಅಲ್ಲೇ ಒಂದು ಬಾರಿ ಪರೀಕ್ಷಾರ್ಥ ಉಡಾವಣೆ ನಡೆಸಲಿದ್ದು, ಫ್ರಾನ್ಸ್ ಪೈಲಟ್ ವಿಮಾನ ಹಾರಿಸಿದ್ರೆ, ರಾಜನಾಥ್ ಸಿಂಗ್ ಕಾಕ್ ಪಿಟ್ ಜಾಗದಲ್ಲಿ ಕುಳಿತುಕೊಳ್ಳಲಿದ್ದಾರೆ.

2016ರಲ್ಲಿ ಭಾರತ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದಕ್ಕಾಗಿ ಭಾರತ 59 ಸಾವಿರ ಕೋಟಿ ರೂಪಾಯಿ ವ್ಯಯಿಸಿದೆ. ಇದರ ಮೊದಲ ಬ್ಯಾಚ್‍ನ 4 ಯುದ್ಧ ವಿಮಾನಗಳು ಮುಂದಿನ ಮೇ ತಿಂಗಳಲ್ಲಿ ಭಾರತ ತಲುಪಲಿದೆ.

Contact Us for Advertisement

Leave a Reply