ಮಿಗ್-21 ಹಾರಿಸಿದ ಅಭಿನಂದನ್ ವರ್ಧಮಾನ್

ಭಾರತ ಮಾತೆಯ ಹೆಮ್ಮೆಯ ಪುತ್ರ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್-21 ವಿಮಾನ ಹಾರಿಸಿದ್ದಾರೆ. ಇವತ್ತು ವಾಯುಸೇನೆಯ 87ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ನಡೀತಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‍ನಲ್ಲಿರೋ ಹಿಂಡನ್ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದೆ. ಇದರಲ್ಲಿ ಅಭಿನಂದನ್ ವರ್ಧಮಾನ್ ಮಿಗ್ ಫಾರ್ಮೇಷನ್‍ನ್ನು ಲೀಡ್ ಮಾಡಿದ್ದು, ಮಿಗ್-21 ಬಿಸನ್ ವಿಮಾನವನ್ನು ಹಾರಿಸಿದ್ದಾರೆ.

ಸುಖೋಯ್-30 ಎಂಕೆಐನ ಅವೆಂಜರ್ ಫಾರ್ಮೇಷನ್‍ನಲ್ಲಿ ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ಭಾಗಿಯಾಗಿದ್ದ ಇಬ್ಬರು ಯೋಧರು ಭಾಗಿಯಾಗಿದ್ದಾರೆ.

Contact Us for Advertisement

Leave a Reply