ಅಜಾತ ಶತ್ರು ವಾಜಪೇಯಿ ಜೀವನಾಧರಿತ ಸಿನಿಮಾ ತೆರೆಗೆ! ಯಾವಾಗ?

masthmagaa.com:

ದೇಶದ ರಾಜಕೀಯದಲ್ಲಿ ಅಜಾತಶತ್ರು ಎಂದೇ ಹೆಸರಾದ ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಜೀವನಾಧಾರಿತ ಚಿತ್ರವೊಂದು ಶ್ರೀಘ್ರದಲ್ಲೇ ತಯಾರಾಗಲಿದೆ. ಈ ಸಿನಿಮಾಗೆ ʻಮೇ ರಹೂನ್‌ ಯಾ ನಾ ರಹೂನ್‌, ಯೇ ದೇಶ್‌ ರೆಹೆನಾ ಚಾಹಿಯೇ- ಅಟಲ್‌ʼ ಎಂದು ಹೆಸರಿಡಲಾಗಿದೆ. ಲೇಖಕ ಉಲ್ಲೇಖ್ ಎನ್‌ ಪಿ ಬರೆದಿರುವ ‘ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟೀಶಿಯನ್ ಆ್ಯಂಡ್ ಪ್ಯಾರಾಡಾಕ್ಸ್’ ಹೆಸರಿನ ಪುಸ್ತಕ ಆಧರಿಸಿ ಈ ಸಿನಿಮಾ ರೆಡಿಯಾಗುತ್ತೆ. 2023ರ ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ ಅಂತ ನಿರ್ಮಾಪಕ ವಿನೋದ್‌ ಭಾನುಶಾಲಿ ಮತ್ತು ಸಂದೀಪ್‌ ಸಿಂಗ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply