ಅಜಯ್ ರಾವ್, ಸಂಜನಾ ಆನಂದ್ ಅಭಿನಯದ “ಶೋಕಿವಾಲ” ಟೀಸರ್ ಬಿಡುಗಡೆ!

masthmagaa.com:

ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ “ಶೋಕಿವಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ ಅಜಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ಟೀಸರ್ ಮಹಾಲಕ್ಷ್ಮಿ ಪುರದಲ್ಲಿರುವ ಅಣ್ಣವ್ರ ಪ್ರತಿಮೆ ಬಳಿ ಬಿಡುಗಡೆಯಾಗಿದೆ. ಅಪ್ಪು ಅವರ ಪ್ರತಿಮೆ ಕೂಡಯಿದ್ದು, ಇಬ್ಬರು ದಿಗ್ಗಜರ ಪ್ರತಿಮೆ ಮುಂದೆ “ಶೋಕಿವಾಲ” ಚಿತ್ರದ ಟೀಸರ್, ಶ್ರೀರಾಮನವಮಿಯ ಪುಣ್ಯದಿನದಂದು ಬಿಡುಗಡೆಯಾಗಿದ್ದು ವಿಶೇಷ.

ನನ್ನ ಮೊದಲ ಸಿನಿಮಾದ ಟೀಸರ್ ರೀಲಿಸ್ ಅಗಿದೆ. ಎಲ್ಲಾ ಕಡೆಯಿಂದಲ್ಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ…‌ ಮುಂದಿನ ದಿನಗಳಲ್ಲಿ “ಶೋಕಿವಾಲ” ಚಿತ್ರದ ಮೊದಲ ವೀಡಿಯೋ ಸಾಂಗ್ ಬಿಡುಗಡೆ ಮಾಡುವ ತಯಾರಿ ನಡೆಸಿದ್ದೇವೆ. ಇದೇ ತಿಂಗಳು 29 ರಂದು ಚಿತ್ರವನ್ನು ಕರ್ನಾಟಕದಾದ್ಯಂತ ಭರ್ಜರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ. ವಿತರಕರ ಕಡೆಯಿಂದಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದ್ದು, ಅಜಯ್ ರಾವ್ ಅವರಿಗೆ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಹೆಸರು ತಂದುಕೊಡಲಿದೆ ಎಂದು ನಿರ್ದೇಶಕ ಜಾಕಿ ತಿಳಿಸಿದ್ದಾರೆ. ಅವಕಾಶ ನೀಡಿದ ನಿರ್ಮಾಪಕರಿಗೆ ನಿರ್ದೇಶಕರು ಧನ್ಯವಾದ ತಿಳಿಸಿದ್ದಾರೆ.

ಪಕ್ಕಾ ಹಳ್ಳಿ ಸೊಗಡಿನ ಈ ಚಿತ್ರದಲ್ಲಿ ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಮುಂತಾದ ಕಲಾವಿದರು ನಟಿಸಿದ್ದಾರೆ.ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. .

ಶ್ರೀಧರ್. ವಿ. ಸಂಭ್ರಮ್ ರವರಮ, ಸಂಗೀತವಿದ್ದು 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.
ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ.ನವೀನ್ ಕುಮಾರ್.ಎಸ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ , ಪ್ರಶಾಂತ್ ರಾಜಪ್ಪ ಸಂಭಾಷಣೆ, ಮೋಹನ್ ನೃತ್ಯ ನಿರ್ದೇಶನ,
ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ
ಮೈಸೂರು ರಘು ರವರ! ನಿರ್ದೇಶನ ಈ ಚಿತ್ರಕ್ಕಿದೆ.

-masthmagaa.com

Contact Us for Advertisement

Leave a Reply