ಅಕ್ಷಯ್ ಕುಮಾರ್ ಹೊಸ ಲುಕ್ ಹೇಗಿದೆ ನೋಡಿ…

ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂಥಾ ಪಾತ್ರ ಮಾಡಲ್ಲ ಅಂತಿಲ್ಲ. ಸಿಕ್ಕಿದ ಎಲ್ಲಾ ಪಾತ್ರಕ್ಕೂ ಬಣ್ಣ ಹಚ್ಚಿ ಜೀವ ತುಂಬುವ ನಟ ಅಕ್ಷಯ್ ಕುಮಾರ್. ಈಗ ಅಕ್ಷಯ್ ಕುಮಾರ್ ಅವರ ಲಕ್ಷ್ಮೀ ಬಾಂಬ್ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಅದರಲ್ಲಿ ಅಕ್ಷಯ್ ಕುಮಾರ್ ಕೋಪಗೊಂಡಿರುವ ತೃತೀಯ ಲಿಂಗಿಯ ವೇಷದಲ್ಲಿದ್ದಾರೆ. ಕೆಂಪು ಸೀರೆ ಉಟ್ಟು, ಹಣೆಯಲ್ಲಿ ದೊಡ್ಡದಾಗಿ ಕುಂಕುಮ ಇಟ್ಟಿದ್ದಾರೆ. ಅವರ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಟ್ವಿಟ್ಟರ್‍ನಲ್ಲಿ ಪೋಸ್ಟರ್ ಹಾಕಿರುವ ಅಕ್ಷಯ್ ಕುಮಾರ್, ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಾನು ನನ್ನ ಲಕ್ಷ್ಮೀ ರೂಪದ ಈ ಲುಕ್ ಅನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಪಾತ್ರದಲ್ಲಿ ಉತ್ಸಾಹದ ಜೊತೆಗೆ ನನಗೆ ಭಯವಾಗಿದೆ. ನಮ್ಮ ಕಂಫರ್ಟ್ ಜೋನ್ ದಾಟಿ ಬಂದ ಬಳಿಕವೇ ಜೀವನ ಶುರುವಾಗುತ್ತೆ ಅಲ್ವಾ..? ಎಂದು ಬರೆದುಕೊಂಡಿದ್ದಾರೆ.

Contact Us for Advertisement

Leave a Reply