masthmagaa.com:

ಈ ಸೃಷ್ಟಿಯಲ್ಲಿ ಭೂಮಿ ಮೇಲೆ ಮಾತ್ರ ಜೀವಿಗಳಿರೋದಾ ಅಥವಾ ಬೇರೆ ಗ್ರಹಗಳಲ್ಲೂ ಜೀವಿಗಳಿವೆಯೋ ಅನ್ನೋದು ಇನ್ನೂ ಕೂಡ ನಿಗೂಢ ಪ್ರಶ್ನೆಯಾಗಿದೆ. ಇದೀಗ ದೂರದ 19 ನಕ್ಷತ್ರಗಳಿಂದ ಸಿಗ್ನಲ್​ಗಳನ್ನು ವಿಶ್ವದ ಅತಿ ಶಕ್ತಿಶಾಲಿ ರೇಡಿಯೋ ಆಂಟೆನಾ ಬಳಸೋ ಖಗೋಳ ತಜ್ಞರು ಹೇಳಿದ್ದಾರೆ. ಈ ನಕ್ಷತ್ರಗಳಿಂದ ಬಂದಿರೋ ಸಿಗ್ನಲ್​​ಗಳು ಈ ನಕ್ಷತ್ರಗಳ ಸುತ್ತ ಗ್ರಹಗಳು ಸುತ್ತತ್ತವೆ ಅನ್ನೋದನ್ನ ತೋರಿಸುತ್ತೆ. ಇವೆಲ್ಲವೂ ಕೆಂಪು ಕುಬ್ಜ ನಕ್ಷತ್ರಗಳಾಗಿದ್ದು, ಭೂಮಿಯಿಂದ 165 ಲೈಟ್ ಇಯರ್ಸ್ ದೂರದಲ್ಲಿವೆ. ಇವುಗಳ ಪೈಕಿ 4 ನಕ್ಷತ್ರಗಳಿಂದ ಬಂದ ಸಿಗ್ನಲ್ ಅಂತೂ ತಮ್ಮ ಸುತ್ತಲೂ ಗ್ರಹಗಳು ಸುತ್ತುತ್ತಿವೆ ಅನ್ನೋದನ್ನು ಸುಂದರವಾಗಿ ವರ್ಣಿಸಿವೆ ಅಂತ ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿರೋ ಕ್ವೀನ್ಸ್​​ಲ್ಯಾಂಡ್ ಯೂನಿವರ್ಸಿಟಿಯ ತಜ್ಞರ ತಂಡವೊಂದು ತಿಳಿಸಿದ್ದಾರೆ. ಇದ್ರಲ್ಲಿ ಡಚ್ ನ್ಯಾಷನಲ್ ಅಬ್ಸರ್ವೇಟರಿಯ ತಜ್ಞರು ಕೂಡ ಇದ್ದಾರೆ. ಅಂದಹಾಗೆ ಗ್ರಹದ ಕಾಂತೀಯ ಶಕ್ತಿ ಮತ್ತು ಸೌರ ಮಾರುತಗಳ ನಡುವೆ ಘರ್ಷಣೆಯಾಗಿ ರೇಡಿಯೋ ತರಂಗಗಳು ಬಿಡುಗಡೆಯಾಗುತ್ತವೆ. ನಮ್ಮ ಸೌರ ಮಂಡಲದ ಅಧ್ಯಯನದ ಮೂಲಕ ತಜ್ಞರು ಈ ಬಗ್ಗೆ ತಿಳಿದುಕೊಂಡಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ಸೌರ ಮಂಡಲದ ಹೊರಭಾಗದಿಂದ ಈ ರೀತಿಯ ರೇಡಿಯೋ ತರಂಗಗಳನ್ನು ಖಗೋಳ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ಆದ್ರೆ ಆ ಗ್ರಹದ ಗಾತ್ರ ಎಷ್ಟು ದೊಡ್ಡದಿದೆ..? ವಾಸಿಸಲು ಯೋಗ್ಯವಾಗಿದೆಯಾ..? ಅನ್ನೋದನ್ನ ತಜ್ಞರು ಇನ್ನೂ ಪತ್ತೆಹಚ್ಚಿಲ್ಲ. ನಮ್ಮ ಸೌರ ಮಂಡಲದಲ್ಲಿ ಸೌರ ಮಾರುತಕ್ಕೆ ಗುರು ಗ್ರಹದ ಸಂಘರ್ಷ ನಡೆದಾಗ ಬಿಡುಗಡೆಯಾಗೋ ಸಿಗ್ನಲ್​​ ಮತ್ತು ಈಗ ಹೊರಗಿನಿಂದ ಬಂದಿರೋ ಸಿಗ್ನಲ್ ನಡುವೆ ಹೋಲಿಕೆ ಇದೆ ಅಂತ ವಿಜ್ಞಾನಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply