ಭಾರತದಲ್ಲಿನ ಕೆಲ ಆಪರೇಶನ್‌ಗಳನ್ನ ಕ್ಲೋಸ್‌ ಮಾಡಲಿರುವ ಅಮೆಜಾನ್!‌ ನೂರಾರು ಉದ್ಯೋಗಿಗಳ ಕೆಲಸಕ್ಕೆ ಕತ್ತರಿ!

masthmagaa.com:

ಕಂಪನಿಗಳು ತಮ್ಮ ವೆಚ್ಚವನ್ನ ಉಳಿಸೊ ನಿಟ್ಟಿನಲ್ಲಿ ನೂರಾರು ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕೋ ಟ್ರೆಂಡ್‌ ನಡೀತಿದೆ. ಟ್ವಿಟರ್‌, ಮೆಟಾದಂತಹ ದೊಡ್ಡ ದೊಡ್ಡ ಕಂಪನಿಗಳೇ ಉದ್ಯೋಗಿಗಳನ್ನ ತೆಗೆದು ಹಾಕ್ತಿವೆ. ಇದೀಗ ವೆಚ್ಚ ಕಡಿತದ ಭಾಗವಾಗಿ ಅಮೆಜಾನ್‌ ಇಂಡಿಯಾ, ಭಾರತದಲ್ಲಿನ ಕೆಲ ಕಾರ್ಯಾಚರಣೆಗಳನ್ನ ಸ್ಟಾಪ್‌ ಮಾಡೋದಕ್ಕೆ ಪ್ಲ್ಯಾನ್‌ ಮಾಡ್ತಿದೆ. ಈ ನಿಟ್ಟಿನಲ್ಲಿ ಫುಡ್‌ ಡೆಲಿವರಿ ಹಾಗೂ ಸಣ್ಣ ಸಣ್ಣ ವ್ಯವಹಾರಗಳಿಗೆ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನ ಡೆಲಿವರಿ ಮಾಡೋದನ್ನ ಸ್ಟಾಪ್‌ ಮಾಡುತ್ತೆ ಅಂತ ಕಂಪನಿ ಹೇಳಿದೆ. ಇದ್ರಿಂದ ನೂರಾರು ಉದ್ಯೋಗಿಗಳು ಕೆಲಸ ಕಳಿದುಕೊಳ್ಳೊ ಮುನ್ಸೂಚನೆ ಸಿಕ್ಕಿದೆ. ವಿಶ್ವಾದ್ಯಂತ ಹಲವು ಕಡೆ ಅಮೆಜಾನ್‌ ಬ್ಯುಸಿನೆಸ್‌ನಲ್ಲಿ ಬೆಳವಣಿಗೆ ಸ್ಲೋ ಆಗ್ತಿರೋದ್ರಿಂದ ಈ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ ಅಂತ ಕಂಪನಿ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply