ಇಮ್ರಾನ್ ಖಾನ್‍ಗೆ ಟ್ರಂಪ್ ಶಾಕ್..! ಹೌಡಿ ಮೋದಿ ಮೋಡಿ..?

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲು ಅಮೆರಿಕಾಗೆ ಹೋಗಿರೋ ಇಮ್ರಾನ್ ಖಾನ್‍ಗೆ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದ್ದಾರೆ. ನಿನ್ನೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ್ರು. ಈ ವೇಳೆ ಇಮ್ರಾನ್ ಖಾನ್ ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಈ ವಿಚಾರವಾಗಿ ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದ್ರೆ ನೀವು ಮಧ್ಯಸ್ಥಿಕೆ ವಹಿಸಬೇಕು ಅಂತ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಟ್ರಂಪ್, ಭಾರತದೊಂದಿಗೆ ನನ್ನ ಸಂಬಂಧ ತುಂಬಾ ಚೆನ್ನಾಗಿದೆ. ಮೋದಿ ಕಾಶ್ಮೀರ ಮತ್ತು 370ನೇ ವಿಧಿಯ ಬಗ್ಗೆ ಮಾತನಾಡಿದ ಭಾಷಣ ಆಕ್ರಮಣಕಾರಿಯಾಗಿತ್ತು. ಜನ ಕೂಡ ತುಂಬಾ ಚೆನ್ನಾಗಿ ಭಾಷಣ ಕೇಳುತ್ತಿದ್ದರು. ನನಗೆ ಪಾಕಿಸ್ತಾನದ ಮೇಲೆ ನಂಬಿಕೆ ಇದೆ ಆದ್ರೆ ನನ್ನ ಮುಂದೆ ಇರುವವರಿಗೆ ಪಾಕ್ ಮೇಲೆ ನಂಬಿಕೆ ಇಲ್ಲ. ಭಾರತ-ಪಾಕಿಸ್ತಾನ ರಾಜಿ ಮಾಡಿಕೊಂಡಲ್ಲಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಇದೇ ವೇಳೆ ಪಾಕ್ ಪತ್ರಕರ್ತನೊಬ್ಬ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದಾಗ ಇಂಥವರನ್ನೆಲ್ಲಾ ಎಲ್ಲಿಂದ ಕರೆತರುತ್ತೀರಿ ಎಂದು ಇಮ್ರಾನ್ ಖಾನ್ ಅವರನ್ನು ಟ್ರಂಪ್ ಕಿಚಾಯಿಸಿದ್ದಾರೆ.

ಇನ್ನು ಭಾರತ, ಅಫ್ಘಾನಿಸ್ಥಾನ ಮತ್ತು ಇರಾನ್ ವಿಚಾರವಾಗಿ ಪ್ರಸ್ತಾಪಿಸಿದಾಗಲೂ ನಿಮಗೆ ಒಳ್ಳೆಯ ನೆರೆಹೊರೆಯವರು ಇದ್ದಾರೆ ಅಂದ್ರು. ಈ ಮೂಲಕ ಭಾರತವನ್ನು ಹೊಗಳಿ ಇಮ್ರಾನ್ ಖಾನ್‍ಗೆ ಟಾಂಗ್ ಕೊಟ್ರು.

Contact Us for Advertisement

Leave a Reply