ಡಿಸೆಂಬರ್​​​ನಲ್ಲಿ ಬಿಜೆಪಿಗೆ ಹೊಸ ಅಧ್ಯಕ್ಷ..! ಅಮಿತ್ ಶಾ ಘೋಷಣೆ

ಡಿಸೆಂಬರ್ ಅಂತ್ಯದೊಳಗೆ ಬಿಜೆಪಿಗೆ ಹೊರ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕ ಮಾತನಾಡಿದ ಅವರು, ಅಮಿತ್ ಶಾ ಸೂಪರ್ ಪವರ್ ಆಗಿ ತೆರೆಮರೆಯಲ್ಲಿ ಇದ್ದುಕೊಂಡು ಪಕ್ಷವನ್ನು ಕಂಟ್ರೋಲ್ ಮಾಡ್ತಾರೆ ಎಂಬ ಮಾತುಗಳನ್ನು ಅವರು ಅಲ್ಲಗಳೆದಿದ್ದಾರೆ. ಅಲ್ಲದೆ ನಮ್ಮದು ಬಿಜೆಪಿ. ಕಾಂಗ್ರೆಸ್ ಅಲ್ಲ. ಬಿಜೆಪಿಯನ್ನು ತೆರೆಮರೆಯಲ್ಲಿ ಕುಳಿತು ಯಾರೂ ಮುನ್ನಡೆಸಲು ಸಾಧ್ಯವಿಲ್ಲ. ಪಕ್ಷದ ಸಂವಿಧಾನದಂತೆ ಪಕ್ಷವನ್ನು ಮುನ್ನಡೆಸಲಾಗುತ್ತೆ ಎಂದಿದ್ದಾರೆ.

ಬಿಜೆಪಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ತತ್ವವನ್ನು ಪಾಲಿಸುತ್ತಿದ್ದು, ಅದರಂತೆ ಅಮಿತ್ ಶಾ ಈಗ ಕ್ಯಾಬಿನೆಟ್ ಸೇರಿಸೋದ್ರಿಂದ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ಮಾಡಬೇಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಎಲೆಕ್ಷನ್​​​ಗಳು ನಡೆಯುತ್ತಿವೆ. ಹೀಗಾಗಿ ಹೊಸ ಅಧ್ಯಕ್ಷರು ಡಿಸೆಂಬರ್​ನಲ್ಲಿ ಅಧಿಕಾರ ಸ್ವೀಕರಿಸಿ, ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ತಿಳಿಸಿದ್ರು.

Contact Us for Advertisement

Leave a Reply