masthmagaa.com:
ಕಳೆದ 7 ದಿನಗಳಿಂದ ಜಮ್ಮು- ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸೇನೆ ಹಾಗೂ ಜಮ್ಮು- ಕಾಶ್ಮೀರ ಪೊಲೀಸರ ಜಂಟಿ ಉಗ್ರರ ಭೇಟೆ ಇಂದು ಅಂತ್ಯವಾಗಿದೆ. ಇಂದು ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್ ಗುಂಪಿಗೆ ಸೇರಿದ ಇಬ್ಬರು ಉಗ್ರನನ್ನ ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪತ್ತೆಯಾಗಿರುವ ಓರ್ವ ಉಗ್ರನನ್ನ LET ಕಮಾಂಡರ್ ಉಝೈರ್ ಖಾನ್ ಅಂತ ಗುರುತಿಸಲಾಗಿದೆ. ಮತ್ತೋರ್ವ ಭಯೋತ್ಪಾದಕನ ಗುರುತು ಇನ್ನೂ ಪತ್ತೆಯಾಗಿಲ್ಲ ಅಂತ ಕಾಶ್ಮೀರ ADGP ವಿಜಯ್ ಕುಮಾರ್ ಹೇಳಿದ್ದಾರೆ. ಉಗ್ರರ ಹತ್ಯೆಯೊಂದಿಗೆ 7 ದಿನಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿರೋದಾಗಿ ಹೇಳಿದ್ದಾರೆ. ಅಂದ್ಹಾಗೆ ಭಯೋತ್ಪಾದಕ ಉಜೈರ್ ಖಾನ್ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
-masthmagaa.com
Contact Us for Advertisement